ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ಘನ ತ್ಯಾಜ್ಯ ನಿರ್ವಹಣಾ ಮೇಲುಸ್ತುವಾರಿ ಸಮಿತಿ ಸಭೆ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವತಿಯಿಂದ ಘನ ತ್ಯಾಜ್ಯ ಘಟಕದ ಮೇಲುಸ್ತುವರಿ ಸಮಿತಿ ಸಭೆ ನೇತಾಜಿ ಸುಬಾಸ್‌ಚಂದ್ರ ಬೋಸ್ ಸಭಾಂಗಣದಲ್ಲಿ ಸೆ.25ರಂದು ನಡೆಯಿತು. ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಮಾತನಾಡಿ ಆರ್ಯಾಪು ಗ್ರಾ.ಪಂ ವ್ಯಾಪ್ತಿಯಲ್ಲಿ ಒಣ ಕಸ ಸಂಗ್ರಹಣೆಯಲ್ಲಿ ಗ್ರಾ.ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಕಸ ಸಂಗ್ರಹಣೆಯಲ್ಲಿ ಸರೋವರ ಸಂಜೀವಿನಿ ಒಕ್ಕೂಟದ ಪಾಲ್ಗೊಳ್ಳುವಿಕೆಯನ್ನು ಹಾಗೂ ಒಕ್ಕೂಟದ ಜವಬ್ದಾರಿಯನ್ನು ಕೂಡ ವಿವರಿಸಲಾಯಿತು. ಕಾರ್ಯಕ್ರಮ ಸಂಯೋಜಕರಾಗಿದ್ದ ಪುತ್ತೂರು ತಾಲೂಕು ಪಂಚಾಯತ್‌ನ ಜಗನ್‌ರವರು ವೈಜ್ಞಾನಿಕವಾಗಿ ಒಣ ಕಸವನ್ನು ಸಂಗ್ರಹಣೆ ಮಾಡುವ ಮಾಹಿತಿ, ಕಸ ಸಂಗ್ರಹಣೆ ಶುಲ್ಕದ ಆದಾಯ ಹಾಗೂ ಖರ್ಚು ಬಗ್ಗೆ ಸಭೆಗೆ ತಿಳಿಸಿದರು.

ಸಭೆಯಲ್ಲಿ ಸರೋವರ ಸಂಜೀವಿನಿ ಒಕ್ಕೂಟದ ಅಧ್ಯಕ್ಷಕ್ಷೆ ಭಾರತಿ, ಗ್ರಾ.ಪಂ ಸದಸ್ಯರಾದ ವಸಂತ ಶ್ರೀದುರ್ಗಾ, ನೇಮಾಕ್ಷ ಸುವರ್ಣ, ಸುಬ್ರಹ್ಮಣ್ಯ ಬಲ್ಯಾಯ, ಶ್ರೀನಿವಾಸ ರೈ, ಯತೀಶ ಡಿ ಬಿ. ಹರೀಶ್ ನಾಯಕ್, ಸರಸ್ವತಿ ಕೆ, ಕಲಾವತಿ, ಸರೋವರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಉಪಸ್ಥಿತದಿದ್ದರು. ಗ್ರಾ.ಪಂ ಕಾರ್ಯದರ್ಶಿ ಮೋನಪ್ಪ ಕೆ ಕಾರ್ಯಕ್ರಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಒಣ ಕಸ ಸಂಗ್ರಹಣೆ ಮಾಡುವ ಕಾರ್ಮಿಕರಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here