ಪತ್ರಕರ್ತರಿಗೆ ಪುನಶ್ಚೇತನ ಕಾರ್ಯಾಗಾರ

0

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ವತಿಯಿಂದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ. ಪತ್ರಕರ್ತರಿಗೆ ವೃತ್ತಿ ರಂಗದ ಆಧುನಿಕ ಸವಾಲುಗಳಿಗೆ ಪರಿಹಾರ, ಪರಿಣಾಮಕಾರಿ ವರದಿಗಾರಿಕೆ ಮತ್ತು ಬರವಣಿಗೆಯಲ್ಲಿ ಸುಧಾರಣೆ, ಮಾನಸಿಕ ಒತ್ತಡ ನಿವಾರಣೆ, ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೈಬರ್ ಲಾ ಮತ್ತಿತರ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.

ಪುನಶ್ಚೇತನ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಇರುವ ಜಿಲ್ಲೆಯ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕು.(ನಿಗದಿತ ಸಂಖ್ಯೆಯ ಸದಸ್ಯರಿಗೆ ಮಾತ್ರ ಅವಕಾಶ ಇರುವುದರಿಂದ ನೋಂದಣಿ ಕಡ್ಡಾಯ) ಮಾಧ್ಯಮ ಸಂಸ್ಥೆ ಪ್ರತಿಯೊಂದು ಕಚೇರಿಯಿಂದ ಗರಿಷ್ಠ 3 ಮಂದಿಗೆ, ತಾಲೂಕು ಸಂಘಗಳಿಂದ ತಲಾ 5 ಮಂದಿಗೆ ಭಾಗವಹಿಸಲು ಅವಕಾಶ ಇದೆ. ಕಾರ್ಯಾಗಾರದ ದಿನಾಂಕ, ಸ್ಥಳವನ್ನು ಮುಂದೆ ತಿಳಿಸಲಾಗುವುದು. ಹೆಸರು ನೋಂದಣಿಗೆ ಅಕ್ಟೋಬರ್ 05 ರಂದುಕೊನೆಯ ದಿನವಾಗಿದೆ.

ಕಾರ್ಯಾಗಾರ ಭಾಗವಹಿಸಿದ ಪತ್ರಕರ್ತರಿಗೆ ಪರಿಣಾಮಕಾರಿಯಾಗಿ ತಲುಪಬೇಕು ಎಂಬ ಉದ್ದೇಶದಿಂದ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಇದೇ ಮಾದರಿಯ ಸರಣಿ ಕಾರ್ಯಾಗಾರ ಮುಂದಿನ ಹಂತಗಳಲ್ಲಿ ನಡೆಯಲಿದ್ದು ಆಸಕ್ತರಿಗೆ ಅವಕಾಶ ಕಲ್ಪಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ಸಂಯೋಜಕರಾದ ವಿಜಯ ಕೋಟ್ಯಾನ್- 9448503582, ಆರ್.ಸಿ.ಭಟ್- 9448216722 ಇವರನ್ನು ಸಂಪರ್ಕಿಸಬಹುದೆಂದು ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here