ನಾಣಿಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್, ಬೆಲ್ಟ್, ಟೈ ವಿತರಣೆ ಕಾರ್ಯಕ್ರಮ

0

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್, ಬೆಲ್ಟ್, ಟೈ ವಿತರಣೆ ಕಾರ್ಯಕ್ರಮ ಅ 2ರಂದು ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ದಲಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಬಿಡುಗಡೆ ವರದಿಗಾರ ಸುಧಾಕರ್ ಕಾಣಿಯೂರು ಐಡಿ ಕಾರ್ಡ್, ಬೆಲ್ಟ್, ಟೈ ವಿತರಣೆಗೆ ಚಾಲನೆ ನೀಡಿದರು.


ಕಾಣಿಯೂರು ಗ್ರಾ. ಪಂ. ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಗ್ರಾ.ಪಂ. ಸದಸ್ಯರಾದ ಗಣೇಶ್ ಉದನಡ್ಕ, ತೇಜಕುಮಾರಿ ಉದ್ಲಡ್ಡ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಕುಸುಮಾವತಿ, ಶಾಲಾ ವಿದ್ಯಾರ್ಥಿ ನಾಯಕ ಗಗನ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ಸ್ವಾಗತಿಸಿ, ಶಿಕ್ಷಕಿ ಸವಿತಾ ವಂದಿಸಿದರು. ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು.
ಎಸ್. ಡಿ. ಎಂ.ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಜೀವಿತಾ, ಶ್ವೇತಾ, ಹವ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here