ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ಕ್ರೀಡಾಕೂಟ

0

ಆತ್ಮವಿಮರ್ಶೆಯ ಮನೋಭಾವ ನಮ್ಮದಾದಾಗ ಗೆಲುವಿನ ಬದುಕು: ಡಾ. ಧರ್ಮಪಾಲನಾಥ ಸ್ವಾಮೀಜಿ

ಉಪ್ಪಿನಂಗಡಿ: ಕ್ರೀಡೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಆದರೆ ಸೋತಾಗ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುವ ಮನೋಭಾವ ನಮ್ಮದಾದಾಗ ಮಾತ್ರ ಗೆಲುವಿನ ಬದುಕು ನಮ್ಮದಾಗಲು ಸಾಧ್ಯ ಎಂದು ಪೆರಿಯಡ್ಕದ ಸರ್ವೋದಯ ಪ್ರೌಢಶಾಲೆಯ ಕಾರ್ಯದರ್ಶಿಗಳು, ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದರು.


ಇಲ್ಲಿನ ಪೆರಿಯಡ್ಕದ ಸರ್ವೋದಯ ಪ್ರೌಢಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು
ಬದುಕಿನಲ್ಲಿ ಯಾವತ್ತೂ ಉತ್ಸಾಹ, ಹುಮ್ಮಸ್ಸು, ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ವಲಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವಾಗಲೇ ಮುಂದಕ್ಕೆ ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆಯುವ ಕನಸು ನಮ್ಮದಾಗಿರಬೇಕು. ಗ್ರಾಮೀಣ ಪ್ರತಿಭೆಗಳು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಡ್ರೆಸ್ ಕೋಡ್, ಶೂಗಳನ್ನು ನೋಡಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಇಲ್ಲಿ ಕ್ರೀಡಾ ಮನೋಭಾವದ ದೃಷ್ಟಿಕೋನ ಮಾತ್ರ ನಮ್ಮಲ್ಲಿ ಮುಖ್ಯವಾಗಬೇಕು. ಆಗ ಮಾತ್ರ ಗೆಲುವು ಸಾಧ್ಯ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಭಿವೃದ್ಧಿಯ ಜೊತೆಯಲ್ಲಿ ಸಾಮಾಜಿಕ, ವೈಜ್ಞಾನಿಕವಾಗಿ ಜಗತ್ತಿಗೆ ನಾಯಕತ್ವ ಕೊಡುವ ದೇಶ ನಮ್ಮದಾಗಿದ್ದು, ಈಗ ಕ್ರೀಡೆಯಲ್ಲಿ ಕೂಡಾ ಮುಂದುವರಿದ ರಾಷ್ಟ್ರವೆನಿಸಿದೆ. ಶಾಲೆಗಳು ಭವಿಷ್ಯ ರೂಪಿಸುವ ವಿದ್ಯಾಮಂದಿರಗಳಾಗಿದ್ದು, ಗುರುಗಳ ಮಾರ್ಗದರ್ಶನದಿಂದ ದೇಶದ ಮುಂದಿನ ಭವಿಷ್ಯವನ್ನು ರೂಪಿಸುವ ಕೆಲಸ ವಿದ್ಯಾರ್ಥಿಗಳಿಂದಾಗಲಿ. ಕ್ರೀಡೆಯ ಮೂಲಕ ಶಿಸ್ತು, ದೈಹಿಕ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಶಾಲೆಯ ವರ್ಚಸ್ಸನ್ನು ಹೆಚ್ಚಿಸುವ ಕೆಲಸ ವಿದ್ಯಾರ್ಥಿಗಳಿಂದಾಗಬೇಕು ಎಂದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ ಶುಭ ಹಾರೈಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಪರವೀಕ್ಷಕ ಭುವನೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಂದರ ಗೌಡ ಅರ್ಬಿ, ಸರ್ವೋದಯ ಪ್ರೌಢಶಾಲಾ ಪರಿವೀಕ್ಷಕ ಬಾಲಕೃಷ್ಣ ಗೌಡ ಬಿ.ಟಿ., ಪ್ರೌಢಶಾಲಾ ನೋಡೆಲ್ ಅಧಿಕಾರಿ ಚಕ್ರಪಾಣಿ ಎ.ವಿ, ಪ್ರಾಥಮಿಕ ಶಾಲಾ ವಿಭಾಗದ ನೋಡೆಲ್ ಅಧಿಕಾರಿ ಜೋನ್ ಕೆ.ಪಿ, ಸಹಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ಬಜತ್ತೂರು ಕ್ಲಸ್ಟರ್ ಸಿಆರ್ ಪಿ ಮಂಜುನಾಥ್, ಉಪ್ಪಿನಂಗಡಿ ಕ್ಲಸ್ಟರ್ ಸಿಆರ್ ಪಿ ಅಶ್ರಫ್, ನೆಲ್ಯಾಡಿ ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್, ಕಡಬ ಸಹ ಶಿಕ್ಷಕ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ, ದೈಹಿಕ ಶಿಕ್ಷಕ ಸಂಘ ಗ್ರೇಡ್ 1 ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಗದ ಅಧ್ಯಕ್ಷ ನವೀನ್ ರೈ, ಪ್ರೌಢಶಾಲಾ ಸಹಶಿಕ್ಷಕ ಸಂಘದ ಉಪಾಧ್ಯಕ್ಷ ಲಲಿತಾ, ಕಡಬ ವಲಯ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಬಜತ್ತೂರು ಗ್ರಾಮಪಂಚಾಯತ್ ಅಧ್ಯಕ್ಷ ಗಂಗಾಧರ ಗೌಡ ನೆಕ್ಕರಾಜೆ, ಸರ್ವೋದಯ ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷ ರಾಮಚಂದ್ರ ಗೌಡ ನೆಡ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರ್ವೋದಯ ಪೌಢಶಾಲಾ ಮುಖ್ಯಗುರು ಲಕ್ಷ್ಮಿ ಪಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ವಂದಿಸಿದರು. ಶಿಕ್ಷಕರಾದ ಸವಿತಾ ಪಿ.ಎಸ್ ಹಾಗೂ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here