ಶ್ರೀ ಸತ್ಯಸಾಯಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಎರಡನೇ ಬ್ಯಾಚಿನ ಸದಸ್ಯರಿಗೆ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ

0

ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇದರ ವತಿಯಿಂದ ಶ್ರೀ ದುರ್ಗಾ ಯುವಕ ಮಂಡಲ ಕೆಯ್ಯೂರು ಇದರ ಸಹಕಾರದೊಂದಿಗೆ ಶ್ರೀ ಸತ್ಯಸಾಯಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ಮತ್ತು ಪ್ಯಾಶನ್ ಡಿಸೈನಿಂಗ್ ತರಬೇತಿಯ ಎರಡನೇ ಬ್ಯಾಚ್ ನವರಿಗೆ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವು ಅ. 9 ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು. ಪುತ್ತೂರು ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕ ರಘುನಾಥ ರೈ ಪ್ರಾಸ್ತವಿಕವಾಗಿ ಮಾತನಾಡಿದರು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಉತ್ತರ ಇದರ ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪೈ ಸರ್ಟಿಫಿಕೇಟ್ ವಿತರಣೆ ಮಾಡಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದಕ್ಷಿಣ ಕನ್ನಡ ಇದರ ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್, ಜಿಲ್ಲಾ ಸೇವಾ ಸಂಯೋಜಕಿ ಶಾಂತಿ ಭಟ್, ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಮೂಕಾಂಬಿಕಾ ಎನ್ ರಾವ್, ಜಿಲ್ಲಾ ಆಧ್ಯಾತ್ಮಿಕ ಸಂಯೋಜಕ ಜಯರಾಮ್ ಭಾರದ್ವಾಜ್, ಶ್ರೀ ದುರ್ಗಾ ಯುವಕ ಮಂಡಲದ ಅಧ್ಯಕ್ಷ ಹರೀಶ್ ಪಾಟಾಳಿ ದೇರ್ಲ,ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸದಸ್ಯರು ಮತ್ತು ಒಂದನೇ ಮತ್ತು ಮೂರನೇ ಬ್ಯಾಚ್ ನ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 2 ನೇ ಬ್ಯಾಚ್ ನ ಸದಸ್ಯೆ ಗೀತಾ ಲಕ್ಷ್ಮಿ ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. 2 ನೇ ಬ್ಯಾಚಿನ ಸದಸ್ಯರು ಶಿಕ್ಷಕಿ ಮೀನಾಕ್ಷಿ ರೈಯವರನ್ನು ಗೌರವಿಸಿದರು ಮತ್ತು ಯುವಕ ಮಂಡಲಕ್ಕೆ ಕೊಡುಗೆಗಳನ್ನು ನೀಡಿದರು. ಶೋಭಾ ರೈ ಸ್ವಾಗತಿಸಿ,ಕಾವ್ಯ ರೈ ವಂದಿಸಿ, ವಿದ್ಯಾಶ್ರೀ ನಿರೂಪಿಸಿದರು. ಕೇಂದ್ರದ ಸಂಯೋಜಕ ಶ್ರೀಧರ ಪೂಜಾರಿ, ಪಂಚಾಯತ್ ನ ಮಾಜಿ ಅಧ್ಯಕ್ಷ ಬಾಬು, ಹೊನ್ನಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here