ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ನವರಾತ್ರಿ ಉತ್ಸವದ ಸಂಭ್ರಮ 

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ನವರಾತ್ರಿ ಉತ್ಸವವು ಅ.14 ರಿಂದ ಆರಂಭಗೊಂಡು ಅ.24ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 

ಅ.14ರಂದು ಬೆಳಿಗ್ಗೆ ಮಹಾಲಯ ಅಮಾವಾಸ್ಯೆ, ಪ್ರಾರ್ಥನೆ, ಗಣಪತಿ ಹೋಮ, ನವರಾತ್ರಿ ಉತ್ಸವ ಆರಂಭ. ಅ.15ರಂದು ಬೆಳಗ್ಗೆ 108 ತೆಂಗಿನಕಾಯಿ ಮಹಾಗಣಪತಿ ಹೋಮ ಮತ್ತು ಚಂಡಿಕಾಯಾಗ ಆರಂಭ ಹಾಗೂ ತೆನೆ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಅ.15ರಿಂದ ಅ.24ರವರೆಗೆ ಹರಕೆ ರಂಗಪೂಜೆ ನಡೆಯಲಿದೆ. ಅ.23ರಂದು ಮಹಾನವಮಿ, ಬೆಳಗ್ಗೆ ಆಯುಧ ಪೂಜೆ, ಭಂಡಾರದ ಲೆಕ್ಕದಲ್ಲಿ ರಂಗಪೂಜೆ ಮತ್ತು ಹರಕೆ ಸೇವೆ. ಅ.24 ವಿಜಯದಶಮಿ, ಮಕ್ಕಳ ಅಕ್ಷರಾಭ್ಯಾಸ ಪ್ರಾರಂಭ, ನಾಗತಂಬಿಲ, ಮಹಾಪೂಜೆ ಮತ್ತು ದೈವಗಳಿಗೆ ತಂಬಿಲ ಕಾರ್ಯಕ್ರಮ ನಡೆಯಲಿದೆ ಮತ್ತು ಪ್ರತಿದಿನ ವಿವಿದ ಭಜನಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.‌

ನವರಾತ್ರಿ ಎಲ್ಲಾ ದಿನಗಳಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ಹಾಗೂ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here