ಪುತ್ತೂರು:ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು, ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್, ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ, ಜಿಲ್ಲಾ ವೆನ್‌ಲಾಕ್ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಹಾಗೂ ತಾಲೂಕು ಸರಕಾರಿ ಆಸ್ಪತ್ರೆ ಪುತ್ತೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸ ಶಿಬಿರವು ಅ.17ರಂದು ಕೋರ್ಟ್‌ರಸ್ತೆಯ ಸತ್ಯಸಾಯಿ ಮಂದಿರದಲ್ಲಿ ನಡೆಯಿತು.
ಶಿಬಿರವನ್ನು ವೇಣುಗೋಪಾಲ ಶೆಣೈ ದೀಪ ಬೆಳಗಿಸಿ ಉದ್ಘಾಟಸಿ ಶುಭಹಾರೈಸಿದರು. ವೈದ್ಯರಾದ ಡಾ.ಪ್ರೇರಣ, ಡಾ.ರಾಮಾನುಜಂ, ನೇತ್ರಾಧಿಕಾರಿ ಶಾಂತರಾಜ್, ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್. ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಯಿಶ್ವರಿ ಹಾಗೂ ಜೀವಿತ ಸ್ವಾಗತಿಸಿದರು. ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷ ಡಾ ಸತ್ಯಸುಂದರ ರಾವ್ ಸ್ವಾಗತಿಸಿದರು. ಮಧಸೂದನ ಕಾರ್ಯಕ್ರಮ ನಿರೂಪಿಸಿ, ರಘುನಾಥ ರೈ ವಂದಿಸಿದರು. ಹಿರಿಯರಾದ ಮಧುಸೂದನ ನಾಯಕ್ ಸಹಕರಿಸಿದರು.
ಶಿಬಿರದಲ್ಲಿ ಒಟ್ಟು 270 ಮಂದಿ ಭಾಗವಹಿಸಿದ್ದು 224 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. 7 ಮಂದಿಯನ್ನು ಶಸ್ತ್ರ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು.