ಇಚ್ಲಂಪಾಡಿ: ಅಲ್ಫೋನ್ಸಾ ಮಾತೃ ವೇದಿಕೆಯಿಂದ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಅಗತ್ಯ ವಸ್ತು ವಿತರಣೆ

0

ನೆಲ್ಯಾಡಿ: ನೆಲ್ಯಾಡಿ ಅಲ್ಫೋನ್ಸಾ ಚರ್ಚ್‌ನ ಮಾತೆಯರ ವೇದಿಕೆಯಿಂದ ಇಚಿಲಂಪಾಡಿಯ ಮಹಿಳಾ ಪುನರ್ವಸತಿ ಕೇಂದ್ರ ಆಶಾಭವನಕ್ಕೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಆಶ್ರಮವಾಸಿಗಳಿಗಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಪುನರ್ವಸತಿ ಕೇಂದ್ರಕ್ಕೆ ಅಗತ್ಯವಾದ ಆಹಾರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಅಲ್ಫೋನ್ಸಾ ಮಾತೃ ವೇದಿಕೆಯಿಂದ ನೀಡಲಾಯಿತು. ಸಂಘದ ಅಧ್ಯಕ್ಷೆ ಜೇಸಿಂತ ಕೆ.ಜೆ, ಪದಾಧಿಕಾರಿಗಳಾದ ಮೇರಿ ಜಾನ್, ಲಿನ್ಸಿ ಮನೋಜ್, ಶೈನಿ ಮನೋಜ್, ಡಯಾನಾ ಶಾಜಿ, ಕೆಎಸ್‌ಎಂ ಸಿಎ ನಿರ್ದೇಶಕರಾದ ಫಾ.ಶಾಜಿ ಮಾಥ್ಯುರವರ ನೇತೃತ್ವದಲ್ಲಿ ಅಗತ್ಯ ವಸ್ತು ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here