ಬೆಟ್ಟಂಪಾಡಿ: ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪೂಜಾ ಸಮಿತಿ ಶ್ರೀಕ್ಷೇತ್ರ ಬೆಟ್ಟಂಪಾಡಿ ಇದರ ವತಿಯಿಂದ 11ನೇ ವರ್ಷದ
ಸಾಮೂಹಿಕ ದುರ್ಗಾಪೂಜೆ ಯು.ಕಶೆಕೋಡಿ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ಅ.20ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಜರಗಲಿದೆ.
ಸಂಜೆ ಗಂ.5.೦೦ರಿಂದ ದುರ್ಗಾಪೂಜೆ ಆರಂಭ ಸಂಜೆ ಗಂ.7ಕ್ಕೆ ಮಂಗಳಾರತಿ ನಡೆಯಲಿದೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ಆರ್.ಬಿ. ಸುವರ್ಣ ವಹಿಸಲಿದ್ದಾರೆ. ಉದ್ಯಾನ ವಿನ್ಯಾಸಕರೂ, ಲೇಖಕರೂ ಆದ ಪ್ರಕಾಶ್ ಮಲ್ಪೆಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ವಕೀಲರಾದ ವಸಂತಕೃಷ್ಣ ಕೋನಡ್ಕ, ಬೆಂಗಳೂರಿನ ವೆಂಕಟೇಶ್ವರ ಪವರ್ ಸೊಲ್ಯೂಷನ್ ನ ಸತ್ಯ ಎನ್., ಮುಂಬಯಿ ಉದ್ಯಮಿ ಚೇತನ್ ರೈ ತಲೆಪ್ಪಾಡಿ, ಮಂಗಳೂರಿನ ಶ್ರೀ ಕಟೀಲ್ ಲಾಜಿಸ್ಟಿಕ್ ನ ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ ಉದ್ಯಮಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಕೆಎಂಎಫ್ ಮಂಗಳೂರಿನ ಕೆಮಿಸ್ಟ್ರಿ ಗ್ರೇಡ್-1 ಉದ್ಯೋಗಿ ಶ್ರೀದೇವಿ ಎನ್.,
ನಿಡ್ಪಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಗೀತಾ ಡಿ. ಭಾಗವಹಿಸಲಿದ್ದಾರೆ.
ನಿವೃತ್ತ ಸೈನಿಕರಿಗೆ ಸನ್ಮಾನ: ನಿವೃತ್ತ ಹೆಡ್ಕಾನ್ಸ್ಟೇಬಲ್ ಹವಾಲ್ದಾರ್ ಬಾಲಕೃಷ್ಣ ಎನ್.ರವರಿಗೆ ಸನ್ಮಾನ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಜರಗಲಿದೆ ಎಂದು ಪೂಜಾ ಸಮಿತಿಯ ಪ್ರಕಟಣೆ ತಿಳಿಸಿದೆ.