ಎಸ್.ಪಿ.ವೈ.ಎಸ್.ಎಸ್ ರವರಿಂದ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯೋಗ ದುರ್ಗಾನಮಸ್ಕಾರ,ಲಕ್ಷ್ಮೀ ಅಷ್ಟೋತ್ತರ ಪಠಣ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.20 ಶುಕ್ರವಾರ ಬೆಳಿಗ್ಗೆ 4:45 ರಿಂದ 6:15 ರ ತನಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆಲಂಕಾರು, ಕೊಯಿಲ,ಗಾಣಿಗ ಸಮುದಾಯ ಭವನ, ಉಪ್ಪಿನಂಗಡಿ ಶಾಖೆಯ ಯೋಗಬಂಧುಗಳಿಂದ ಯೋಗ ದುರ್ಗಾನಮಸ್ಕಾರ, ಲಕ್ಷ್ಮೀ ಅಷ್ಟೋತ್ತರ ಪಠಣ ನಡೆಯಿತು.

ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಮುಂದಾಳು ಈಶ್ವರ ಭಟ್ಟ್ ಕೊಂಡಾಡಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಲಂಕಾರು ಶಾಖೆಯ ಪ್ರಮುಖರಾದ ಸದಾಶಿವ ಶೆಟ್ಟಿ ಮಾರಂಗ, ಆಲಂಕಾರು ಶಾಖೆಯ ಯೋಗಬಂಧುಗಳಾದ ವಿಠಲ ರೈ ಮನವಳಿಕೆ, ಪ್ರದೀಪ್ ರೈ ಮನವಳಿಕೆ, ಕೃತಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪ್ಪಿನಂಗಡಿ ಶಾಖೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಉಸಿರಾಟ ಕ್ರಿಯೆ, ಮಾನಸಿಕ ಸಿದ್ದತೆ ನಡೆಸಿ ಗಾಣಿಗ ಸಮುದಾಯ ಭವನದ ಪುಷ್ಪಲತಾ ಬೌದ್ದಿಕ್ ನೇರವೆರಿಸಿದರು. ಉಪ್ಪಿನಂಗಡಿ ಶಾಖೆಯ ಶಿಕ್ಷಕರಾದ ಗೋವಿಂದ ಪ್ರಸಾದ್ ಕಜೆ, ಗಾಣಿಗ ಸಮುದಾಯ ಭವನದ ಶಿಕ್ಷಕಿ ಮೋಹಿನಿ, ಆಲಂಕಾರು ಶಾಖೆಯ ಶಿಕ್ಷಕ ಗುರುಕಿರಣ್ ಶೆಟ್ಟಿ ಹಾಗು ಕೊಯಿಲ,ಆಲಂಕಾರು, ಗಾಣಿಗ ಸಮುದಾಯ ಭವನ, ಉಪ್ಪಿನಂಗಡಿ ಶಾಖೆಯ ಯೋಗಬಂಧುಗಳು ಪ್ರಾತ್ಯಕ್ಷತೆಯಲ್ಲಿ ಭಾಗವಹಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕದ್ರಿ ನಗರದ ಮಾರ್ಗದರ್ಶಕ ಹಾಗು ಜಿಲ್ಲಾ ಪ್ರಮುಖ ಆನಂದ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಿ
ಆಲಂಕಾರು, ಕೊಯಿಲ,ಉಪ್ಪಿನಂಗಡಿ, ಗಾಣಿಗ ಸಮುದಾಯ ಭವನದ ಯೋಗಬಂಧುಗಳು ಲಕ್ಷ್ಮೀ ಅಷ್ಟೋತ್ತರ ಪಠಣ ನೇರವೆರಸಿದರು. ಆಲಂಕಾರು ಶಾಖೆಯ ಯೋಗಬಂಧುಗಳು ಭಜನೆ, ಅಮೃತವಚನ ಪಂಚಾಂಗ ಪಠಣ ನೇರವೆರಿಸಿದರು. ಕೊಯಿಲ ಶಾಖೆಯ ಯೋಗಬಂಧು ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿ, ಗಾಣಿಗ ಸಮದಾಯಭವನದ ಶಿಕ್ಷಕರಾದ ಕೃಷ್ಣಪ್ಪಣ್ಣ ಆಲಂಕಾರು ಶಾಖೆಯ ಯೋಗಬಂಧು ಪೂವಪ್ಪ ನಾಯ್ಕ್ ಎಸ್ ಹಾಗೂ
ಮಲ್ಲಿಕಾ ಸ್ವಾಗತಿಸಿ, ನವೀನ ವಂದಿಸಿದರು.
ಉಪ್ಪಿನಂಗಡಿ ಶಾಖೆಯ ವಿಜೇತರವರು ಅನ್ನಪೂರ್ಣೇಶ್ವರಿ ಮಂತ್ರವನ್ನು ನೇರವೆರಿಸಿದರು. ಆಲಂಕಾರು, ಗಾಣಿಗ ಸಮುದಾಯ ಭವನ,ಉಪ್ಪಿನಂಗಡಿ, ಕೊಯಿಲ ಶಾಖೆಯ ಒಟ್ಟು 145 ಮಂದಿ ಯೋಗಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here