ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಎಸ್.ಎಂ.ಟಿ.ಶಾಖೆಯ ವಾರ್ಷಿಕೋತ್ಸವ – ಲಕ್ಷ್ಮೀ ಪೂಜೆ

0

ಜನಸಾಮಾನ್ಯರ ಆರ್ಥಿಕ ಅಗತ್ಯಗಳ ಪೂರೈಕೆಯಲ್ಲಿ ಸಂಘದಿಂದ ಪ್ರಮುಖ ಪಾತ್ರ- ಸಂಜೀವ ಮಠಂದೂರು
ಈ ಶಾಖೆ ಮಾದರಿ ಶಾಖೆಯಾಗಿ ಮೂಡಿಬರಬೇಕು – ಚಿದಾನಂದ ಬೈಲಾಡಿ
ಸಂಘದಿಂದ ಇನ್ನಷ್ಟು ಸಾಧನೆಯ ನಿರೀಕ್ಷೆ – ವಿಶ್ವನಾಥ ಗೌಡ

ಪುತ್ತೂರು: ಪುತ್ತೂರು ಮತ್ತು ಕಡಬ ಸೇರಿ 9 ಶಾಖೆಗಳನ್ನೊಳಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಎಸ್ ಎಮ್ ಟಿ ಶಾಖೆಯ ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆ ಅ.21 ರಂದು ಬೆಳಿಗ್ಗೆ ನಡೆಯಿತು. ಪೂಜೆಯ ಬಳಿಕ ಸರಳ ಸಮಾರಂಭ ನಡೆಯಿತು.

ಜನಸಾಮಾನ್ಯರ ಆರ್ಥಿಕ ಅಗತ್ಯಗಳ ಪೂರೈಕೆಯಲ್ಲಿ ಸಂಘದಿಂದ ಪ್ರಮುಖ ಪಾತ್ರ:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂತ ಹೆಚ್ಚು ವ್ಯವಸ್ಥಿತವಾಗಿ ಜನಸಾಮಾನ್ಯರ ಹೆಚ್ಚು ಆರ್ಥಿಕ ಬೇಕು ಬೇಡಗಳನ್ನು ಪೂರೈಸುವ ಕೆಲಸವನ್ನು ಇವತ್ತು ಸಹಕಾರಿ ಸಂಘ ಮಾಡಿದೆ ಅದರಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕೂಡಾ ಒಂದು.‌ ವಾರ್ಷಿಕ ಹಣಕಾಸಿನ ವರ್ಷದಲ್ಲಿ ಎಸ್ ಸಿ ಡಿ ಸಿ ಬ್ಯಾಂಕ್ ನಿಂದ ಪ್ರಶಸ್ತಿ ಪಡೆಯುವ ಮೂಲಕ ಒಂದಷ್ಟು ಶಿಸ್ತು ಪಡೆದ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನೊಳಗೊಂಡಿರುವ ಸಂಘ ಮುಂದಿನ ಆರ್ಥಿಕ ವರ್ಷದಲ್ಲೂ ಸಾಧನೆಯನ್ನು ಮಾಡಿ ಒಳ್ಳೆಯ ಸೇವೆ ಕೊಡುವ ಮೂಲಕ ನೂರಕ್ಕೆ ನೂರು ಸಾಲ ವಸೂಲಾತಿ ಮತ್ತು ನೂರಕ್ಕೆ ನೂರು ಡೆಪೋಸಿಟ್ ನ್ನು ಸಂಗ್ರಹ ಮಾಡುವ ಶಕ್ತಿ ಸಿಗಲಿ ಎಂದರು.


ಈ ಶಾಖೆ ಮಾದರಿ ಶಾಖೆಯಾಗಿ ಮೂಡಿಬರಬೇಕು:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ನಮ್ಮಲ್ಲಿ ಒಟ್ಟು ಶಾಖೆಗಳ ಪೈಕಿ ವ್ಯವಹಾರದಲ್ಲಿ ಕಡಬ, ಉಪ್ಪಿನಂಗಡಿ, ಎಪಿಎಂಸಿ ಶಾಖೆಗಳು ಸ್ಪರ್ಧಾತ್ಮಕ ರೀತಿಯಲ್ಲಿ‌ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನ ಈ ಶಾಖೆಯು ಮಾದರಿ ಶಾಖೆಯಾಗಿ ಮೂಡಿ ಬರಲಿ ಎಂದರು.


ಸಂಘದಿಂದ ಇನ್ನಷ್ಟು ಸಾಧನೆಯ ನಿರೀಕ್ಷೆ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಅವರು ಮಾತನಾಡಿ ಸುಮಾರು 400 ಕೋಟಿ ರೂಪಾಯಿ ವ್ಯವಹಾರ ನಡೆಸಿ ರೂ.1 ಕೋಟಿ ಲಾಭಾಂಶ ಪಡೆಯುವ ಮೂಲಕ ಸಾಧನೆ ಮಾಡಿದ ನಮ್ಮ ಒಕ್ಕಲಿಗ ಗೌಡ ಸೇವಾ ಸಂಘದ ಸಹ ಸಂಸ್ಥೆಯಾಗಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ಇನ್ನಷ್ಟು ಹೆಚ್ಚು ಸಾಧನೆ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು ಪಿ ರಾಮಕೃಷ್ಣ, ನಿರ್ದೇಶಕರಾದ ಮೋಹನ್ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳವೇಲು, ಸಂಜೀವ ಗೌಡ ಕೆ, ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಸದಸ್ಯರಾದ ರವಿ ಮುಂಗ್ಲಿಮನೆ, ಬಾಬು ಗೌಡ ಭಂಡಾರದಮನೆ, ಸೀತಾರಾಮ ಗೌಡ ಪೆರಿಯತ್ತೋಡಿ, ಗೌರಿ ಬನ್ನೂರು, ಮೀನಾಕ್ಷಿ ಡಿ ಗೌಡ, ಸುರೇಶ್ ಗೌಡ ಕಲ್ಲಾರೆ‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕಿ ನಿಶ್ಚಿತಾ ಡಿ ವಂದಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಲೆಕ್ಕಪರಿಶೋಧನಾಧಿಕಾರಿ ಶ್ರೀಧರ್ ಗೌಡ ಕಣಜಾಲು, ನ್ಯಾಯವಾದಿ ಸಂಜಯ್ ಡಿ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಬೊಮ್ಮೆಟ್ಟಿ, ಪದಾಧಿಕಾರಿಗಳಾದ ಲಿಂಗಪ್ಪ ಗೌಡ ತೆಂಕಿಲ, ರಾಧಾಕೃಷ್ಣ ನಂದಿಲ, ಕಾನೂನು ಸಲಹೆಗಾರ ಜಯಪ್ರಕಾಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here