ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಬೆಟ್ಟoಪಾಡಿ ವಲಯದ ಜನನಿ, ಅಮೃತವರ್ಷಿಣಿ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ಅ.20 ರಂದು ನಡೆಯಿತು.
ತಾಲೂಕು ಯೋಜನಾಧಿಕಾರಿ ಶಶಿಧರ್.ಎಂ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪ್ರಾಸ್ತವಿಕವಾಗಿ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪ್ರಯೋಜನ ಮತ್ತು ಕೇಂದ್ರದಲ್ಲಿ ನಡೆಯುವ ವಿವಿಧ ಮಾಹಿತಿ ಕಾರ್ಯಕ್ರಮದ ಪ್ರಯೋಜನ, ಯೋಜನೆಯ ಹಿನ್ನೆಲೆ ಬಗ್ಗೆ ಮಾರ್ಗದರ್ಶನ ನೀಡಿದರು. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯೆ ಮೀನಾಕ್ಷಿ ಮಂಜುನಾಥ ಮಹಿಳೆಯರು ಸ್ವ ಉದ್ಯೋಗ ಮಾಡಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯಬೇಕು ಹಾಗೂ ಯಾರಿಗೂ ಅವಲಂಬಿತವಾಗದೆ ದುಡಿಯಬೇಕು ಎಂದು ತಿಳಿಸಿದರು.
ರುಡ್ ಸೆಟ್ ಸಂಸ್ಥೆಯ ಪ್ರವೀಣ್ ಸ್ವಉದ್ಯೋಗ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು. ಜೇನು ಕೃಷಿಯ ಬಗ್ಗೆ ಪ್ರಶಸ್ತಿ ವಿಜೇತ ಪ್ರಗತಿಪರ ಜೇನು ಕೃಷಿಕ ಮನಮೋಹನ್ ಅರಂಬ್ಯ ಮಾಹಿತಿ ನೀಡಿದರು.ಈ ಸಭೆಯಲ್ಲಿ ಬೆಟ್ಟoಪಾಡಿ ವಲಯದ ವಲಯಧ್ಯಕ್ಷ ಬಾಲಕೃಷ್ಣ, ಗುಮ್ಮಟೆಗದ್ದೆ ಒಕ್ಕೂಟದ ಅಧ್ಯಕ್ಷ ಹರೀಶ್ ಗೌಡ, ಅಜಲಡ್ಕ ಒಕ್ಕೂಟದ ಅಧ್ಯಕ್ಷ ಚನಿಯಪ್ಪ ನಾಯ್ಕ, ಸೂಪರ್ ರೈ ಚೆಲ್ಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿಜಯಲಕ್ಷ್ಮಿ ಎಸ್.ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಸದಸ್ಯರು, ಸ್ವಸಹಾಯ ಪ್ರಗತಿಬಂಧು ಸಂಘದ ಸದಸ್ಯರು ಸ್ಥಳೀಯರು ಪಾಲ್ಗೊಂಡರು.ಉಪ್ಪಳಿಗೆ ಸೇವಾಪ್ರತಿನಿಧಿ ಭಾರತಿ ಸ್ವಾಗತಿಸಿ, ಒಳಮೊಗ್ರು ಸೇವಾ ಪ್ರತಿನಿಧಿ ತ್ರಿವೇಣಿ ವಂದಿಸಿದರು. ತಾಲೂಕು ಸಮನ್ವಯಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.