ಕೊಕ್ಕಡ: ಓಟಿಪಿ ಪಡೆದು 1.46 ಲಕ್ಷ ರೂ.ವಂಚನೆ-ಮಹಿಳೆ ದೂರು

0

ನೆಲ್ಯಾಡಿ: ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿ ವ್ಯವಹರಿಸಿ ಓಟಿಪಿ ಪಡೆದುಕೊಂಡು ಖಾತೆಯಿಂದ 1,46,900ರೂ.ವರ್ಗಾಯಿಸಿಕೊಂಡು ಮೋಸ ಮಾಡಿರುವ ಬಗ್ಗೆ ಕೊಕ್ಕಡದ ಮಹಿಳೆಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೊಕ್ಕಡ ನಿವಾಸಿ ಹರಿಣಿ (40ವ.) ಮೋಸ ಹೋದವರು. ಹರಿಣಿ ಅವರು 1 ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು. ಸದರಿ ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ಹರಿಣಿಯವರ ಜೊತೆಗೆ ಯಾರೋ ಅಪರಿಚಿತರು ವ್ಯವಹರಿಸಿ ಅ.21ರಂದು ಅಪರಾಹ್ನ ಓಟಿಪಿ ಕೇಳಿ ಪಡೆದುಕೊಂಡು ಹರಿಣಿಯವರ ಖಾತೆಯಿಂದ 1,46,900 ರೂ. ವರ್ಗಾಯಿಸಿ ಮೋಸ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2023, ಕಲಂ:419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here