ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮವಾಗಿದೆ: ಅಶೋಕ್ ರೈ
ಕೆಯ್ಯೂರು: ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು ನಿಜವಾದ ಧರ್ಮವಾಗಿದೆ. ನಮ್ಮ ಧರ್ಮವನ್ನು ಗೌರವಿಸಿ ಇತರೆ ಧರ್ಮವನ್ನು ಗೌರವಿಸುವ ಕೆಲಸ ಆದರೆ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯವಾಗುತ್ತದೆ. ಊರಿನವರ ನೇತೃತ್ಬದಲ್ಲಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತದೆ ಈ ಕಾರಣಕ್ಕೆ ಧರ್ಮ ಉಳಿಯುತ್ತದೆ. ದೇವರಿದ್ದಾನೆ ಎಂಬುದಕ್ಕೆ ಪ್ರಕೃತಿಯೇ ಸಾಕ್ಷಿಯಾಗಿದೆ. ದೇವರು ಎಲ್ಲಾ ಮನುಷ್ಯರನ್ನು ಒಂದೇ ರೀತಿ ಸೃಷ್ಟಿ ಮಾಡಿದ್ದಾನೆ. ನಮ್ಮ ತಂದೆ ತಾಯಿಯೇ ಮೊದಲ ದೇವರು. ತಂದೆ ತಾಯಿ ಆಶೀರ್ವಾದ ಇದ್ದವರಿಗೆ ಮಾತ್ರ ದೇವರ ಅನುಗ್ರಹ ಸಿಗ್ತದೆ . ಸತ್ತ ಬಳಿಕ ಹೆತ್ತವರನ್ನು ಪ್ರೀತಿಸುವ ನಾವು ಅವರು ಬದುಕಿರುವಾಗ ಅವರನ್ನುನಿರ್ಲಕ್ಷ್ಯ ಮಾಡುತ್ತೇವೆ ಇದು ಸಲ್ಲದು ಎಂದು ಹೇಳಿದರು.
ನೀವು ನಿಮ್ಮ ಹೆತ್ತವರನ್ನು ಗೌರವಿಸಿದರೆ ಮಾತ್ರ ನಿಮ್ಮಮಕ್ಕಳು ನಿಮ್ಮನ್ನು ಗೌರವಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ರೈ, ಶಾಸಕ ಅಶೋಕ್ ರೈ, ಹಾಲು ಉತ್ಪಾದಕರ ಸಂಘ ಮಂಗಳೂರು ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ, ಭಾಗ್ಯೇಶ್ ಕೆಯ್ಯೂರು, ವ್ಯವಸ್ಥಾಪನಾ ಸದಸ್ಯರುಗಳಾದ ವಿಶ್ವನಾಥ ಶೆಟ್ಟಿ ಸಾಗು, ಈಶ್ವರಿ ಜೆ ರೈ,ಮಮತಾ ಎಸ್ ರೈ, ಎ ಕೆ ಜಯರಾಂ ರೈ, ಸಂತೋಷ್ ರೈಇಳಂತಾಜೆ, ಪಂಜಿಗುಡ್ಡೆ ಈಶ್ವರ ಭಟ್ ಉಪಸ್ಥಿತರಿದ್ದರು. ಚೇತನ್ ದೇರ್ಲ ಸ್ವಾಗತಿಸಿದರು.