





ಪುತ್ತೂರು:ಇತ್ತೀಚೆಗೆ ಸ.ಉ.ಹಿ.ಪ್ರಾ ಶಾಲೆ ನರಿಮೊಗರು ಇಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೆ.ಪಿ.ಎಸ್ ಕೆಯ್ಯೂರು ಶಾಲೆಯ ಪ್ರಾಥಮಿಕ ವಿಭಾಗದ ಮಕ್ಕಳು ಭಾಗವಹಿಸಿ ಸಾಧನೆ ತೋರಿ ಪ್ರಾಥಮಿಕ ಮತ್ತು 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ 2 ಸಮಗ್ರ ಪ್ರಶಸ್ತಿಯೊಂದಿಗೆ 22 ವಿದ್ಯಾರ್ಥಿಗಳು ಅಕ್ಟೋಬರ್ 26 ಮತ್ತು 27 ರಂದು ಸ.ಪ್ರಾ ಶಾಲೆ ಹೀರೆಬಂಡಾಡಿ ಇಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.


ಶಾಲೆಯ ಧೃತಿ ಜೆ.ರೈ(ಜತ್ತಪ್ಪ ರೈ ಹಾಗೂ ರೇವತಿರವರ ಪುತ್ರಿ) ಕೆಯ್ಯೂರು, ದಿಶಾ ಎಂ.ಡಿ(ದಿನೇಶ್ ಎಂ.ಕೆ ಹಾಗೂ ಮಮತರವರ ಪುತ್ರಿ) ಮಾಡಾವು, ಆಯಿಷತ್ ನಾಫಿಯಾ(ಅಬೂಬಕ್ಕರ್ ಹಾಗೂ ಫಾತಿಮತ್ ಝುಹಾರರವರ ಪುತ್ರಿ) ಕೆಯ್ಯೂರು, ಫಾತಿಮತ್ ಅಝ್ಮಿಯಾ(ಮಹಮ್ಮದ್ ಕೆ ಹಾಗೂ ಆಯಿಷಾರವರ ಪುತ್ರಿ) ಕೆಯ್ಯೂರು, ಫಾತಿಮತ್ ಸೈಮಾ(ಎಂ.ಯು ಲತೀಫ್ ಹಾಗೂ ಆಯಿಷಾರವರ ಪುತ್ರಿ) ಪಾತುಂಜ, ತೇಜಸ್(ಅಶೋಕ್ ಹಾಗೂ ಸುನಂದರವರ ಪುತ್ರ) ಕೆಯ್ಯೂರು, ಗುರುಕಿರಣ್(ದಿ|ದೇವಪ್ಪ ಹಾಗೂ ಸುಂದರಿರವರ ಪುತ್ರ) ಕೆಯ್ಯೂರು, ಸಂಪತ್(ಚಂದಪ್ಪ ಹಾಗೂ ಕಮಲರವರ ಪುತ್ರ) ಉಪ್ಪಳಿಗೆ, ಪಾಲ್ತಾಡಿ, ವಿ.ಆರ್ ಮನ್ವಿತ(ವಿ.ಆರ್ ರಮೇಶ್ ಹಾಗೂ ಆರ್.ಮಲ್ಲಿಕಾರವರ ಪುತ್ರಿ) ಕೈಕಂಬ, ಯಸ್ಮಿ ಕೆ(ರಾಧಾಕೃಷ್ಣ ಗೌಡ ಹಾಗೂ ರೇವತಿರವರ ಪುತ್ರಿ) ಕೆಯ್ಯೂರು, ದಿವಿತ್ ಜೆ ರೈ(ಜತ್ತಪ್ಪ ರೈ ಹಾಗೂ ರೇವತಿರವರ ಪುತ್ರ) ಕೆಯ್ಯೂರು, ಮುಹಮ್ಮದ್ ಅನ್ಸೀಫ್(ಹಮೀದ್ ಹಾಗೂ ಫಾತಿಮತ್ ಝುಹಾರರವರ ಪುತ್ರ) ಪಾತುಂಜ, ಮಹಮ್ಮದ್ ಆರೀಫ್(ಅಶ್ರಫ್ ಹಾಗೂ ಅಸ್ಮಾರವರ ಪುತ್ರ) ಕೈಕಂಬ, ಮಹಮ್ಮದ್ ತೌಸೀಫ್(ಅಬ್ದುಲ್ಲ ಹಾಗೂ ಆಮಿನರವರ ಪುತ್ರ) ಅರಿಕ್ಕಿಲ, ಮುಹಮ್ಮದ್ ರುಶೈದ್(ಉಮ್ಮರ್ ಹಾಗೂ ಕೈರುನ್ನಿಸಾರವರ ಪುತ್ರ) ಕೆಯ್ಯೂರು, ಮುಹಮ್ಮದ್ ಸಂಶೀರ್(ಅಬ್ದುಲ್ ಸತ್ತಾರ್ ಹಾಗೂ ರಾಬಿಯರವರ ಪುತ್ರ) ಕೆಯ್ಯೂರು, ಮೊಹಮ್ಮದ್ ಫೈಝಲ್ ಶೇಖ್(ಶೇಖ್ ಖಾದರ್ ಹಾಗೂ ಫಾತಿಮಾ ಶೇಖ್‌ರವರ ಪುತ್ರ )ಸಣಂಗಳ, ಸಮೀಕ್ಷಾ ಕೆ.ಎಸ್(ಸುಬ್ರಹ್ಮಣ್ಯ ಹಾಗೂ ಸರೋಜಿನಿರವರ ಪುತ್ರಿ) ಕಣಿಯಾರು, ಆದಿಲ(ಹ್ಯಾರಿಸ್ ಹಾಗೂ ಆಬಿದಾರವರ ಪುತ್ರಿ) ಪಾತುಂಜ, ಆಯಿಷತ್ ಶಿಫಾನ(ಇಸ್ಮಾಯಿಲ್ ಹಾಗೂ ಸಫಿಯಾರವರ ಪುತ್ರಿ) ಕೈಕಂಬ, ಆಯಿಷತ್ ಸಾದಿಯಾ(ರಫೀಕ್ ಹಾಗೂ ಅಸ್ಮಾರವರ ಪುತ್ರಿ) ಕೆಯ್ಯೂರು, ಧನುಷ್ ಕೆ.ಸಿ(ಚನಿಯಪ್ಪ ನಾಯ್ಕ ಹಾಗೂ ಸುನಂದರವರ ಪುತ್ರ) ಕೆಯ್ಯೂರು ಇವರುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿರುತ್ತಾರೆ. ಇವರುಗಳಿಗೆ ಶಾಲಾ ಮುಖ್ಯಗುರು ಬಾಬು ಎಂ.ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್ ಕುಮಾರ್ ರೈ ಮತ್ತು ಅಧ್ಯಾಪಕ ವೃಂದದವರು, ಹಿರಿಯ ವಿದ್ಯಾರ್ಥಿ ಸಂತೋಷ್ ಕುಮಾರ್ ಇವರು ವಿವಿಧ ರೀತಿಯ ತರಬೇತಿ ನೀಡಿರುತ್ತಾರೆ.







 
            