ಪುತ್ತೂರು: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾ.ಪಂ ಪುತ್ತೂರು, ಅನುಗ್ರಹ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ, ಒಳಮೊಗ್ರು ಗ್ರಾಮ ಪಂಚಾಯತ್ ಇವುಗಳ ಆಶ್ರಯದಲ್ಲಿ ಸಂಜೀವಿನಿ ಮಾಸಿಕ ಸಂತೆ ಅ.25ರಂದು ಕುಂಬ್ರ ಜಂಕ್ಷನ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ನೆರವೇರಿಸಿದರು. ಗ್ರಾ.ಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಅಭಿವೃದ್ಧಿ ಅಧಿಕಾರಿ ನಮಿತಾ, ಕಾರ್ಯದರ್ಶಿ ಜಯಂತಿ, ಅನುಗ್ರಹ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಹಿಣಿ ಬಿ, ಕಾರ್ಯದರ್ಶಿ ಸುಷ್ಮಾ ಸತೀಶ್, ಒಳಮೊಗ್ರು ಗ್ರಾ.ಪಂ ಸದಸ್ಯರಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ರೇಖಾ, ಚಿತ್ರಾ ಬಿ.ಸಿ, ಶಾರದಾ, ಹಾಗೂ ಗ್ರಾ.ಪಂ ಸಿಬ್ಬಂದಿಗಳು, ಗ್ರಾಮದ ಪ್ರಮುಖರಾದ ನಟ ಸುಂದರ್ ರೈ ಮಂದಾರ, ರಾಜೇಶ್ ರೈ ಪರ್ಪುಂಜ, ಮಾಧವ ರೈ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇತರ ಪಂಚಾಯತ್‌ಗಳಾದ ಬಲ್ನಾಡು, ಆರ್ಯಾಪು, ಮುಂಡೂರು ಇಲ್ಲಿನ ಸದಸ್ಯರು ಆಗಮಿಸಿದ್ದರು.
ಒಳಮೊಗ್ರು ಗ್ರಾ.ಪಂ ಅನುಗ್ರಹ ಸಂಜೀವಿನಿಯ ಎಂಬಿಕೆ ಆಗಿರುವ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.
ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಸುನೀತ, ಸವಿತಾ, ಭಾರತಿ, ಪ್ರಮೀಳಾ ಹಾಗೂ ಗ್ರಾಮಸ್ಥರು, ರಿಕ್ಷಾ ಚಾಲಕರು ಹಾಗೂ ತಾಲೂಕು ಸಂಪನ್ಮೂಲ ವ್ಯಕ್ತಿ ಅಂಕಿತ ಎ ಸಹಕರಿಸಿದರು. ರಚನಾ ಪ್ರಾರ್ಥಿಸಿದರು.