ಜಾನಪದ ಶೈಲಿಯ ಮಾರ್ನೆಮಿ ವೇಷಗಳಿಗೆ ವೇದಿಕೆ ನೀಡಿದ್ದು ಶ್ಲಾಘನೀಯ: ಅಶೋಕ್ ಕುಮಾರ್ ರೈ
ಪುತ್ತೂರು: ಮಾರ್ನೆಮಿಯ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಹುಲಿ ವೇಷ ಸಹಿತ ಬೇರೆ ಬೇರೆ ವೇಷಗಳನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಹುಲಿವೇಷ ಸ್ಪರ್ಧೆಗಳು ನಡೆಯುತ್ತಿದೆ ಆದರೆ ಕುಂಬ್ರದಲ್ಲಿ ಬಾಂದಲಪ್ಪು ಜನಸೇವಾ ಸಮಿತಿಯವರು ನಾಟಿ ಶೈಲಿಯಲ್ಲಿ ಅಂದರೆ ಜಾನಪದ ಶೈಲಿಯ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ನೀಡಿ ಅವಕಾಶ ನೀಡಿದ್ದು ಶ್ಲಾಘನೀಯ ಎಂದು ಶಾಸಕರಾದ ಅಶೋಕ್ ಕುಮಾರ್ ರೈಯವರು ಹೇಳಿದರು.
ಅವರು ಬಾಂದಲಪ್ಪು ಜನಸೇವಾ ಸಮಿತಿ ಕುಂಬ್ರ ಇವರು ಅ.23 ರಂದು ಕುಂಬ್ರ ಚೆನ್ನಪ್ಪ ರೈ- ಜತ್ತಪ್ಪ ರೈ ಸ್ಮಾರಕ ಅಶ್ಚತ್ಥ ಕಟ್ಟೆಯ ಬಳಿ ಆಯೋಜನೆ ಮಾಡಿದ್ದ ಕುಂಬ್ರದ ಮಾರ್ನೆಮಿದ ಗೌಜಿ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕರವರು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ತುಳುನಾಡಿನ ಹುಲಿ ವೇಷ, ಸಿಂಹ ವೇಷ ಇತ್ಯಾದಿಗಳಿಗೆ ಧಾರ್ಮಿಕ ನಂಬಿಕೆಯ ಶಕ್ತಿ ಇದೆ. ಇಲ್ಲಿನ ಜನರು ದೈವ ದೇವರನ್ನು ನಂಬಿ ಮಾರ್ನೆಮಿಯ ದಿನಗಳಲ್ಲಿ ವೇಷ ಹಾಕುತ್ತಾರೆ.ಇಂತಹ ವೇಷಧಾರಿಗಳಿಗೆ ಒಂದು ವೇದಿಕೆಯನ್ನು ನೀಡುವ ಮೂಲಕ ಒಳ್ಳೆಯ ಕಾರ್ಯವನ್ನು ಮಾಡಿದ ಬಾಂದಲಪ್ಪು ಜನಸೇವಾ ಸಮಿತಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಮಹಾನವಮಿಯನ್ನು ತುಳುವಿನಲ್ಲಿ ಮಾರ್ನೆಮಿ ಎಂದು ಕರೆಯುತ್ತಾರೆ. ಇಂತಹ ಮಾರ್ನೆಮಿಯ ದಿನಗಳಲ್ಲಿ ದೈವ ದೇವರ ಹೆಸರಲ್ಲಿ ವೇಷ ಹಾಕಿ ಹರಕೆ ಸಲ್ಲಿಸುವ ತುಳುನಾಡಿನ ಕಲಾವಿದರಿಗೆ ವೇದಿಕೆ ನೀಡುವ ಮೂಲಕ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಯುವಜನಾಂಗಕ್ಕೆ ತಿಳಿಸ ಹೊರಟಿರುವ ಬಾಂದಲಪ್ಪು ಜನಸೇವಾ ಸಮಿತಿಯ ಕಾರ್ಯ ಶ್ಲಾಘನೀಯ. ಬಾಂದಲಪ್ಪು ಜನಸೇವಾ ಸಮಿತಿಯಿಂದ ಇನ್ನಷ್ಟು ಹೊಸ ಹೊಸ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ಕುಂಬ್ರ ಜನ್ಮ ಫ್ಯೂಯಲ್ಸ್ ಮಾಲಕ, ಜನ್ಮ ಪೌಂಡೇಶನ್ ಅಧ್ಯಕ್ಷ, ಉದ್ಯಮಿ ಡಾ.ಹರ್ಷ ಕುಮಾರ್ ರೈ ಮಾಡಾವು, ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ, ನಿವೃತ್ತ ಸೈನಿಕ ಶ್ರೀನಿವಾಸ ರೈ ಕುಂಬ್ರ, ಕುಂಬ್ರ ಶ್ರೀರಾಮಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಮಾತೃಶ್ರೀ ಅರ್ಥ್ಮೂರ್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ಕುಕ್ಕುತ್ತಡಿ ಶ್ರೀ ಬ್ರಹ್ಮಬೈದೆರ್ಕಳ ಗರಡಿ ಮೊಕ್ತೇಸರ ಜಯರಾಮ ಪೂಜಾರಿ ಕುಕ್ಕುತ್ತಡಿ, ಪತ್ರಕರ್ತ ಸಿಶೇ ಕಜೆಮಾರ್, ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಎ.ಕೆ ಜಯರಾಮ ರೈ ಕೆಯ್ಯೂರು, ಕುಕ್ಕುಮುಗೇರು ಶ್ರೀಕ್ಷೇತ್ರದ ಮೊಕ್ತೇಸರ ಎ.ಜಿ ವಿಜಯ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೆನಸ್, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫಿಕ್ ಅಲ್ರಾಯ, ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ, ಅರಿಯಡ್ಕ ಗ್ರಾಪಂ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ನಿಡ್ಪಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲ, ಬನ್ನೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಬಾಂದಲಪ್ಪು ಜನಸೇವಾ ಸಮಿತಿ ಅಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಗೌರವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರಿನಲ್ಲಿ ನಡೆದ ದೊಡ್ಡ ಪಿಲಿಗೊಬ್ಬುಗಳ ಮಧ್ಯೆ ಕುಂಬ್ರದ ಆಸುಪಾಸಿನ ಸಣ್ಣಪುಟ್ಟ ಸಿಂಹ, ಹುಲಿ,ಕರಡಿ ವೇಷಗಳ ಕಲಾವಿದರಿಗೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವ ಸಲುವಾಗಿ ಬಾಂದಲಪ್ಪು ಜನಸೇವಾ ಸಮಿತಿಯ ಸಣ್ಣ ಪ್ರಯೋಗ ಇದಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿರುವುದು ಖುಷಿ ತಂದಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಸಂಘಟನಾ ಕಾರ್ಯದರ್ಶಿ ಶೀನಪ್ಪ ನಾಯ್ಕ ಬೊಳ್ಳಾಡಿ, ಸಂಚಾಲಕ ಶಶಿಕಿರಣ್ ರೈ ನೂಜಿಬೈಲು, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಳ, ಜತೆ ಕಾರ್ಯದರ್ಶಿ ಶಾರದಾ ಆಚಾರ್ಯ, ಸಹ ಕಾರ್ಯದರ್ಶಿ ಚಿತ್ರಾ ಬಿ.ಸಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಶೀರ್ ಕೌಡಿಚ್ಚಾರ್, ಶೇಖರ ರೈ ಕುರಿಕ್ಕಾರ, ಚೆನ್ನ ಬಿಜಳ,ಶಮಿತ್ ರೈ ಕುಂಬ್ರ,ಹರ್ಷಿತ್ ಕುಂಬ್ರ, ಹುಕ್ರ ಬೊಳ್ಳಾಡಿ ಅತಿಥಿಗಳಿಗೆ ಶಾಲು, ಹೂ ನೀಡಿ ಸ್ವಾಗತಿಸಿದರು. ಪಟ್ಟೆ ಪ್ರತಿಭಾ ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಮತ್ತು ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಸಹಕರಿಸಿದ್ದರು.
ಮಾರ್ನೆಮಿದ ಗೌಜಿಯಲ್ಲಿ ಸಾಂಪ್ರದಾಯಿಕ ವೇಷಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾರ್ನೆಮಿ ವೇಷಧಾರಿಗಳ 19 ತಂಡಗಳು ಭಾಗವಹಿಸಿದ್ದು, ಶ್ರೀಧರ ಬಳಗ ಪೆರ್ಲಂಪಾಡಿ ಪ್ರಥಮ, ಆದಿ ಮುಗೇರ್ಕಳ ಫ್ರೆಂಡ್ಸ್ ಬಂಬಿಲ ಪ್ರಥಮ ರನ್ನರ್ಅಫ್ ಮತ್ತು ಕೆಯ್ಯೂರು ಅಂಕತ್ತಡ್ಕ ದ್ವಿತೀಯ ರನ್ನರ್ಅಪ್ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ವಿಜೇತ ತಂಡಗಳಿಗೆ 2 ಮುಡಿ ಮತ್ತು 1 ಮುಡಿ ಅಕ್ಕಿ ಹಾಗೂ ಶಾಶ್ವತ ಫಲಕ ನೀಡಲಾಯಿತು. ಭಾಗವಹಿಸಿ ಎಲ್ಲಾ ತಂಡಗಳಿಗೆ ರೂ.2 ಸಾವಿರ ಗೌರವಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತುಳುನಾಡಿನಲ್ಲೇ ಇದೊಂದು ವಿಭಿನ್ನ ಸ್ಪರ್ಧಾ ಪ್ರಯೋಗವಾಗಿದ್ದು, ಕಂಬಳದ ರೀತಿಯ ಜುಗಲ್ಬಂದಿ ನಿರೂಪಣೆ ಕೇಳಲು ಆಕರ್ಷಕವಾಗಿತ್ತು. ತೀರ್ಪುಗಾರರಾಗಿ ಮನಮೋಹನ್ ರೈ ಅರಂತನಡ್ಕ ಮತ್ತು ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ಜುಗಲ್ಬಂದಿ ನಿರೂಪಣೆಯಲ್ಲಿ ಮೋಹನ ಆಳ್ವ ಮುಂಡಾಳ ಮತ್ತು ನೇಮಾಕ್ಷ ಸುವರ್ಣ ಅಲ್ಲದೆ ವೇಷಗಳ ವೇದಿಕೆ ಪ್ರವೇಶ ಗಂತು ನಿರ್ವಹಣೆಯಲ್ಲಿ ಬಾಬು ದರ್ಬೆತ್ತಡ್ಕ ಸಹಕರಿಸಿದ್ದರು.