ಚೆಲ್ಯಡ್ಕ ರಸ್ತೆಯ ಸೇತುವೆ ಸ್ಲ್ಯಾಬ್‌ ಕುಸಿತ – ಅ.27ರಿಂದ ನ.6ರವರೆಗೆ ಸಂಚಾರ ನಿರ್ಬಂಧ

0

ಪುತ್ತೂರು: ಪುತ್ತೂರು ತಾಲೂಕು ದೇವಸ್ಯ ಚೆಲ್ಯಡ್ಕ ರಸ್ತೆಯ ಚೆಲ್ಯಡ್ಕ ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ಸ್ಲ್ಯಾಬ್‌ ಕುಸಿದಿರುವುದರಿಂದ ಅ.27ರಿಂದ ನ.6ರ ವರೆಗೆ ಸೇತುವೆಯ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಲ್ನಾಡು, ಆರ್ಯಾಪು, ಒಳತ್ತಡ್ಕ,- ದೇವಸ್ಯದಿಂದ ಬೆಟ್ಟಂಪಾಡಿ ಮತ್ತು ಪಾಣಾಜೆ ಕಡೆಗೆ ಸಂಚರಿಸುವವರು ದೇವಸ್ಯ- ಬೈರೋಡಿ- ಕಾಪಿಕಾಡು – ಕೈಕಾರ ಮಾರ್ಗವಾಗಿ ಸಂಚರಿಸುವಂತೆ ಪುತ್ತೂರು ಲೋಕೋಪಯೋಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here