ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹರಿಪ್ರಸಾದ್ ಎಸ್. ಅವರ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ.
ಹರಿಪ್ರಸಾದ್ ಎಸ್. ಅವರು “ಆನ್ಲೈನ್ ಶಾಪಿಂಗ್ – ಅ ಸ್ಟಡಿ ಆಫ್ ಕನ್ಸ್ಯುಮರ್ ಬಯಿಂಗ್ ಬಿಹೇವಿಯರ್ ಆಫ್ ಇ-ಕಾಮರ್ಸ್ ಪೋರ್ಟಲ್ಸ್ ಇನ್ ಇಂಡಿಯಾ” ಎಂಬ ಮಹಾ ಪ್ರಬಂಧವನ್ನು ಮಂಗಳೂರು ವಿವಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ವೈ. ಮುನಿರಾಜು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು. 2022ರ ಡಿಸೆಂಬರ್ನಲ್ಲಿ ಔರಂಗಬಾದ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮರಾಟವಾಡ ಯುನಿವರ್ಸಿಟಿಯಲ್ಲಿ ಜರಗಿದ ಇಂಡಿಯನ್ ಕಾಮರ್ಸ್ ಅಸೋಸಿಯೇಷನ್ 73ನೇ ಆಲ್ ಇಂಡಿಯಾ ಕಾಮರ್ಸ್ ಕಾನ್ಫರೆನ್ಸ್ ನಲ್ಲಿ “ಆನ್ಲೈನ್ ಶಾಪಿಂಗ್ – ಅ ಸ್ಟಡಿ ಆಫ್ ಕಸ್ಟಮರ್ ಪೋಸ್ಟ್ ಪರ್ಚೆಸ್ ಬಿಹೇವಿಯರ್ ಇನ್ ಸೆಲೆಕ್ಟೆಡ್ ಸಿಟೀಸ್ ಆಫ್ ಕರ್ನಾಟಕ” ಎಂಬ ಸಂಶೋಧನಾ ಲೇಖನ ಮಂಡಿಸಿದ ಇವರು ಬೆಸ್ಟ್ ರಿಸರ್ಚ್ ಪೇಪರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಪುತ್ತೂರಿನ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿಯಾಗಿರುವ ಹರಿಪ್ರಸಾದ್ ಎಸ್. ಅವರು ರಮೇಶ್ ರೈ ಮತ್ತು ರತ್ನಾವತಿ ರೈ ದಂಪತಿಯ ಪುತ್ರ.