




ನಿಡ್ಪಳ್ಳಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿ ಅ. 28 ರಂದು ವಾಲ್ಮೀಕಿ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.



ಎಸ್. ಡಿ. ಎಂ. ಸಿ ಅದ್ಯಕ್ಷ ಲೋಕನಾಥ ಆಚಾರ್ಯ, ಮುಖ್ಯಗುರು ಲಿಂಗಮ್ಮ, ಶಿಕ್ಷಕಿ ಪುಷ್ಪಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರೀ, ಎಲ್.ಕೆ.ಜಿ ಶಿಕ್ಷಕಿ ಭಾಗ್ಯಲಕ್ಷ್ಮೀ ಹಾಗೂ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಶಿಕ್ಷಕಿ ನಾಗರತ್ನ ಅವರು ಮಹರ್ಷಿ ವಾಲ್ಮೀಕಿಯವರ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಲಿಂಗಮ್ಮ ಸ್ವಾಗತಿಸಿ, ಅತಿಥಿ ಶಿಕ್ಷಕಿ ಚೇತನಾ ಸತೀಶ್ ವಂದಿಸಿದರು. ಸಹಶಿಕ್ಷಕಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.










