




ಪುತ್ತೂರು :ಅಂಗಡಿಯ ಹಿಂಬದಿಯಲ್ಲಿ ಕಾಣಿಸಿಕೊಂಡ ಹೆಬ್ಬಾವೊಂದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಮರಳಿಸಿದ್ದಾರೆ. ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಇಕ್ಬಾಲ್ ಹುಸೇನ್ ರವರ ಅಂಗಡಿಯ ಹಿಂಬದಿಯಲ್ಲಿ ಕಾಣಿಸಿಕೊಂಡ ಹೆಬ್ಬಾವೊಂದನ್ನು ಕಾಸರಗೋಡಿನ ಮೊಟ್ಟೆ ವಿತರಕ ನೂರುದ್ದೀನ್ ಎಂಬವರು ಹಿಡಿದು ಅರಣ್ಯ ಇಲಾಖೆಯ ಪಾಣಾಜೆ ಶಾಖೆಯ ಸಿಬ್ಬಂದಿಗಳಿಗೆ ನೀಡಿದ್ದು ಅವರು ಕಾಡಿಗೆ ಮರಳಿಸಿದ್ದಾರೆ.








