




ಧನಂಜಯ ರೈಯವರ ಬದುಕು ಸಮಾಜಕ್ಕೆ ಮಾದರಿ- ದುರ್ಗಾಪ್ರಸಾದ್ ರೈ



ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ಪುಂಡಿಕಾಯಿ ನಿವಾಸಿ, ಪ್ರಗತಿಪರ ಕೃಷಿಕ ಧನಂಜಯ ರೈ(ಕುರಿಕ್ಕಾರ)ರವರ ಉತ್ತರಕ್ರಿಯೆ ಅ.28 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಜರಗಿತು.






ಶ್ರದ್ಧಾಂಜಲಿ ಕಾರ‍್ಯಕ್ರಮದಲ್ಲಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ಧನಂಜಯ ರೈಯವರು 15 ವರ್ಷಗಳ ಹಿಂದೆ ಪುತ್ತೂರಿನ ದರ್ಬೆಯ ಮೊದಿನ್ ಬಿಲ್ಡಿಂಗ್‌ನಲ್ಲಿ ಶ್ರುತಿ ಹಾರ್ಡ್ ವೇರ್ ಅಂಗಡಿಯನ್ನು ನಡೆಸಿಕೊಂಡಿದ್ದರು, ಸರಳತೆ, ಮೃದು ಸ್ವಭಾವದ ಧನಂಜಯ ರೈಯವರು ತಮ್ಮ ಬದುಕಿನಲ್ಲಿ ಆದರ್ಶವಾದ ಗುಣವನ್ನು ಹೊಂದಿದ್ದರು. ಪ್ರಗತಿಪರ ಕೃಷಿಕನಾಗಿ ಸಮಾಜ ಮತ್ತು ಕುಟುಂಬದವರಿಗೆ ಅಚ್ಚುಮೆಚ್ಚಿನವರಾಗಿದ್ದರು. ಧನಂಜಯ ರೈಯವರ ಬದುಕು ಸಮಾಜಕ್ಕೆ ಮಾದರಿಯಾಗಿತ್ತು ಎಂದರು.
ಧನಂಜಯ ರೈಯ ಪತ್ನಿ ವಿನೋದ ರೈ, ಪುತ್ರ ಬೆಂಗಳೂರಿನ ಓಟಿಐಎಸ್ ಉದ್ಯೋಗಿ ಶಮಂತ್ ರೈ, ಪುತ್ರಿ ಸಿಟಿಎಸ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ಸಮೀಕ್ಷಾ ರೈ, ಸಹೋದರರಾದ ಆನಂದ ರೈ ಪುಂಡಿಕಾಯಿ, ಬಾಲಕೃಷ್ಣ ರೈ ಪುಂಡಿಕಾಯಿ, ಪಿ.ಟಿ.ರೈ ಪುಂಡಿಕಾಯಿ(ಮಂಗಳೂರು) ಸಹೋದರಿಯರಾದ ರತ್ನಾವತಿ ಶೆಟ್ಟಿ, ರೇವತಿ ರೈ, ಶೀಲಾವತಿ ಶೆಟ್ಟಿ ಮತ್ತು ಕುಟುಂಬಸ್ಥರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರುಗಳು, ಉರ-ಪರವೂರ ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.





