ಸರಕಾರ ಎಸ್ ಟಿ ಸಮಾಜಕ್ಕೆ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ,ಪ್ರಯೋಜನ ಪಡೆದುಕೊಳ್ಳಿ: ಅಶೋಕ್ ರೈ
ಪುತ್ತೂರು: ಪರಿಶಿಷ್ಡ ಪಂಗಡದ ಕುಟುಂಬಗಳ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಮಾಹಿತಿ ಕೊರತೆಯ ಕಾರಣಕ್ಕೆ ಹಲವರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು.ದಲಿತ ಕುಟುಂಬಗಳನ್ನು ಮೇಲಕ್ಕೆತ್ತಲು ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಕೆಲಸವನ್ನು ಮಾಡಿದೆ. ಪ್ರತೀಯೊಂದು ಕುಟುಂಬವೂ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಮಾಹಿತಿ ಕೊರತೆ ಇದ್ದವರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಎಸ್ ಟಿ ಘಟಕದ ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕಮಾತನಾಡಿ ಎಸ್ ಟಿ ಕುಟುಂಬದ ಮತ್ತು ಕನ್ವಶರ್ನ್ ಸಮಸ್ಯೆಯ ಬಗ್ಗೆ ಸಭೆಯಲಿ ವಿವರಿಸಿದರು. ಬ್ಲಾಕ್ ಉಪಾಧ್ಯಕ್ಷ ಮೌರಿಶ್ ಮಸ್ಕರೇನಸ್ ರವರು ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
.ಕಾರ್ಯಕ್ತಮದಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ, ಪಾಣಾಜೆ ಗ್ರಾಪಂ ಸದಸ್ಯೆ ವಿಮಲಾ, ಎಸ್ ಟಿ ಘಟಕದ ಉಪಾಧ್ಯಕ್ಷ ಸದಾನಂದ ನಾಯ್ಕ, ರಾಮನಾಯ್ಕ, ಯು ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಗ್ರಾಪಂ ಸದಸ್ಯ ಮಹಾಲಿಂಗ ನಾಯ್ಕ, ಸುಬ್ರಾಯ ನಾಯ್ಕ ನಿಡ್ಪಳ್ಳಿ,ಐತಪ್ಪ ನಾಯ್ಕ ನಿಡ್ಪಳ್ಳಿ, ನಾಗೇಶ್ ನಾಯ್ಕ ನಿಡ್ಪಳ್ಳಿ, ಸೀತಾರಾಮ ನಾಯ್ಕ, ಗೋಪಾಲ ನಾಯ್ಕ ಪಡುಮಲೆ, ಮೋಹಿನಿ ನರಿಮೊಗರು, ಕರುಣಾಕರ ಪಾಂಗಲಾಯಿ, ಗೋವಿಂದ ನಾಯ್ಕ ಮೊಟ್ಟೆತ್ತಡ್ಕ, ಸವಿತಾ ದೇವಸ್ಯ,ಚಂದ್ರಾವತಿ ಒಳಮೊಗ್ರು,ಮಾದವ ನಾಯ್ಕ ಬೊಳಿಂಜ, ,ಶಶಿಕಲಾ ಬೊಳಿಂಜ, ಗಿರಿಧರ್ ಗೌಡ, ಯೋಗೀಶ್ ಸಾಮಾನಿ, ರಾಘವ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ್ ಭಂಡಾರಿ ಚಿಲ್ಮೆತ್ತಾರು ಸ್ವಾಗತಿಸಿ, ವಂದಿಸಿದರು