ನಗರ ಸಭಾ ಸದಸ್ಯ ಶಕ್ತಿ ಸಿನ್ಹಾವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತಿಚೆಗೆ ನಿಧನರಾದ ನಗರ ಸಭಾ ಸದಸ್ಯ, ನೆಲ್ಲಿಕಟ್ಟೆ ನಿವಾಸಿ ಶಕ್ತಿಸಿನ್ಹಾರವರ ಶ್ರದ್ಧಾಂಜಲಿ ಸಭೆಯು ಅ.30ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆಯಿತು.


ಶಕ್ತಿ ಸಿನ್ಹಾರವರ ಪುತ್ರಿ ಅಸ್ಮೀ ದೀಪ ಪ್ರಜ್ವಲನೆ ಮಾಡಿದರು. ನುಡಿ ನಮನ ಸಲ್ಲಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ಶಕ್ತಿ ಸಿನ್ಹಾ ಅಜಾತ ಶತ್ರುವಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಎಲ್ಲರ ಪ್ರೀತಿ ವಿಶ್ವಾಸಗಳಿಸಿದ್ದ ಅವರು ರಾಜಕೀಯ ಧರ್ಮವನ್ನು ಪಾಲನೆ ಮಾಡಿ ತೋರಿಸಿದ್ದವರು. ಜನಪ್ರತಿನಿಧಿಯಾಗಿ ಯಾವ ರೀತಿ ಜನರ ಮನ ಗೆಲ್ಲಬೇಕು ಎನ್ನುವುದನ್ನು ಯುವ ಪೀಳಿಗೆ ಶಕ್ತಿ ಸಿನ್ಹಾರವರಲ್ಲಿ ಕಲಿಯಬೇಕಿತ್ತು. ಅವರು ಸಕಲಜೀವಿಗಳಲ್ಲಿ ಭಗವಂತನನ್ನು ಕಂಡವರು. ಅಂತಹ ವ್ಯಕ್ತಿತ್ವ ಕಳೆದುಕೊಂಡಿದ್ದೇವೆ. ನಗರ ಸಭೆಯ ಸಮಸ್ಯೆಗಳನ್ನು ವ್ಯಕ್ತಪಡಿಸಿದವರು. ಹೆಸರೇ ಚೈತನ್ಯ ಪೂರ್ಣವಾದುದು. ಅವರು ಬೆಳೆದು ಬಂದ ರೀತಿ, ಸಮಾಜ ಸೇವೆ, ಜೀವನ ಶೈಲಿಯೇ ವಿಶಿಷ್ಠವಾಗಿತ್ತು ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಕ್ತಿ ಸಿನ್ಹಾರವರ ಹೆಸರೇ ಪುತ್ತೂರಿನಲ್ಲಿ ವಿಶಿಷ್ಟವಾಗಿತ್ತು. ಹೆಸರಿನಂತೆ ಅವರ ವ್ಯಕ್ತಿತ್ವ ವಿಶಿಷ್ಠವಾಗಿತ್ತು. ಪುರಸಭೆಗೆ ಸ್ಪರ್ಧಿಸಿದ ಸಮಯದಲ್ಲಿ ಕಠಿನ ಸವಾಲಿನಲ್ಲಿ ಗೆಲುವು ಸಾಧಿಸಿದ್ದರು. ನಂತರ ಮೂರು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರ ನಡತೆ, ಚಿಂತನೆಯಲ್ಲಿ ವಿಭಿನ್ನವಾಗಿತ್ತು. ನಗರ ಸಭೆಯಲ್ಲಿ ಸದಸ್ಯರಿಗೆ ದೊರೆಯುವ ಭತ್ತೆ ಪಡೆದುಕೊಳ್ಳದೆ ಸೇವೆ ಸಲ್ಲಿಸಿದ್ದರು. ಶ್ವಾನ, ಮನುಷ್ಯರಲ್ಲಿ ಒಂದೇ ಪ್ರೀತಿ ಹೊಂದಿದ್ದ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರಾಮಾಣಿಕವಾಗಿ ಕೆಲಸ. ವಾರ್ಡ್ ನಲ್ಲಿ ಗರಿಷ್ಠ ಸೇವೆ. ಮರೆಯಲಾಗ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ಅವರಂತಹ ವ್ಯಕ್ತಿ ಸಮಾಜಕ್ಕೆ ಆವಶ್ಯಕ. ಅವರಲ್ಲಿ ಮನುಷ್ಯತ್ವ ಮೀರಿದ ವ್ಯಕ್ತಿತ್ವ ವಿಶಿಷ್ಠವಾಗಿತ್ತು.
ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ಒಪ್ಪಿಕೊಂಡ ಕೆಲಸವನ್ನು ಪರಿಪೂರ್ಣವಾಗಿ ನಡೆಸುವ ಶಕ್ತಿ ಶಕ್ತಿಸಿನ್ಹಾರವರಲ್ಲಿತ್ತು. ನಗರ ಸಭಾ ಸದಸ್ಯರಾಗಿಯೂ ಸಾಮಾನ್ಯರಂತೆ ಲುಂಗಿ ಉಟ್ಟುಕೊಂಡು ಓಡಾಡಿಕೊಂಡಿದ್ದ ಅವರು ವಾರ್ಡ್‌ನ ಅಭಿವೃದ್ಧಿಯಲ್ಲಿ ಯಾವುದೇ ಬೇಧ ಭಾವವಿಲ್ಲದೆ ಶ್ರಮಿಸಿದವರು. ಮಾನವೀಯತೆಯಲ್ಲಿ ನಾಯಿ ಸಾಕುತ್ತಿದ್ದು ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಅವರಲ್ಲಿತ್ತು. ಎಲ್ಲರೊಂದಿಗೆ ಆತ್ಮೀಯರಾಗಿ ಪರಿಪೂರ್ಣ ವ್ಯಕ್ತಿಯಾಗಿ ಜೀವನ ನಡೆಸಿದವರು.
ಅವರ ಉತ್ತಮ ಕೆಲಸ ಎಲ್ಲರೂ ಕೊಂಡಾಡುತ್ತಾರೆ ಎಂದರು.
ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರ ಸಭಾ ಮಾಜಿ ಅಧ್ಯಕ್ಷರಾದ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಜಯಂತಿ ಬಲ್ನಾಡು, ಮಾಜಿ ಸದಸ್ಯರಾದ ನವೀನ್‌ಚಂದ್ರ ನಾಕ್, ಮಹಮ್ಮದ್ ಆಲಿ, ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ವಿಶ್ವೇಶ್ವರ ಭಟ್ ಬಂಗಾರಡ್ಕ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನೆಲ್ಲಿಕಟ್ಟೆ ಮಿತ್ರಮಂಡಲಿಯ ಹರಿಪ್ರಸಾದ್ ಶೆಟ್ಟಿ, ನಗರ ಕಾಂಗ್ರೆಸ್ ಉಪಾಧ್ಯಕ್ಷ ದಾಮೋದರ ಭಂಡಾರ್‌ಕರ್, ವಾಣಿಜ್ಯ ಮತ್ತು ಕೈಗಾರಿಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ ಸೇರಿದಂತೆ ಹಲವು ಮಂದಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here