ಅಧಿಕಾರ ದುರುಪಯೋಗ, ಭ್ರಷ್ಟಾಚಾರ ವೈಯಕ್ತಿಕ ದ್ವೇಷದಿಂದ ಸುಳ್ಳು ದೂರು-34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಸ್ಪಷ್ಟನೆ

0

ಉಪ್ಪಿನಂಗಡಿ: ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಆರೋಪ ಹೊರಿಸಿ ತನ್ನ ವಿರುದ್ಧ ವೈಯಕ್ತಿಕ ದ್ವೇಷದಿಂದ ಜತೀಂದ್ರ ಶೆಟ್ಟಿಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈಯವರು ಸ್ಪಷ್ಟೀಕರಣ ನೀಡಿದ್ದಾರೆ.


ಬಸವ ವಸತಿ ಯೋಜನೆಯಲ್ಲಿ ನಾನು ಪಡೆದುಕೊಂಡಿರುವ ಅನುದಾನವು ಕಾನೂನು ಬಾಹಿರವಾಗಿರುವುದಿಲ್ಲ. ಈ ಕುರಿತು ತಾಲೂಕು ಪಂಚಾಯತ್ ಅಧಿಕಾರಿಯವರು ವಿಚಾರಣೆ ಮಾಡಿದ್ದು, ನಾನು ಯಾವುದೇ ಕಾನೂನು ಬಾಹಿರವಾಗಿ ಅನುದಾನವನ್ನು ಪಡೆದುಕೊಂಡಿರುವುದಿಲ್ಲ ಎಂದು ಸದ್ರಿ ವಿಚಾರಣೆಯಲ್ಲಿ ಸಾಬೀತು ಪಡಿಸಿರುತ್ತೇನೆ. ಈ ಬಗ್ಗೆ ಯಾವುದೇ ತೀರ್ಮಾನವನ್ನು ತಾ.ಪಂ. ಅಧಿಕಾರಿಯವರು ಕೊಡಬಹುದಲ್ಲದೇ ಜತೀಂದ್ರ ಶೆಟ್ಟಿಯವರು ಕೊಡಲು ಬಾಧ್ಯಸ್ಥರಲ್ಲ. ಗ್ರಾ.ಪಂ. ಚುನಾವಣೆ ಸಂದರ್ಭದಲ್ಲಿ ನಾನು ಚುನಾವಣೆಗೆ ಸ್ಪಽಸುವಾಗ ಯಾವ ಸುಳ್ಳು ಮಾಹಿತಿಯನ್ನೂ ನೀಡಿಲ್ಲ. ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಆಗಲಿಲ್ಲ. ಅಲ್ಲದೇ ನಾನು ದೋಷಿಯೂ ಆಗಿಲ್ಲ. ನನ್ನ ಗಂಡನಿಗೆ ಸಿ.ಎ. ಬ್ಯಾಂಕ್‌ನಲ್ಲಿ ಸಾಲವಿರುವ ಹೊರತು ಬೇರೆ ಯಾವುದೇ ಬ್ಯಾಂಕಿನಲ್ಲಿ ಸಾಲವಿರುವುದಿಲ್ಲ. ಇದು ಕಾನೂನು ಬಾಹಿರವಾಗುವುದೇ ಎಂದು ಪ್ರಶ್ನಿಸಿರುವ ಸುಜಾತ ಆರ್. ರೈಯವರು, ನಮ್ಮ ಕುಟುಂಬದೊಳಗೆ ಯಾವುದೇ ಸಿವಿಲ್ ಕೇಸ್‌ಗಳಿದ್ದಲ್ಲಿ ಅದನ್ನು ಸಿವಿಲ್ ನ್ಯಾಯಾಲಯ ತೀರ್ಮಾನಿಸುತ್ತದೆ. ಆದ್ದರಿಂದ ಜತೀಂದ್ರ ಶೆಟ್ಟಿಯವರಿಗಾಗಲೀ ಬೇರೆ ಯಾರಿಗೇ ಆಗಲಿ ಸಮಸ್ಯೆ ಬರುವುದಿಲ್ಲ. ಸದ್ರಿ ಸಿವಿಲ್ ಕೇಸುಗಳ ಬಗ್ಗೆ ನನ್ನ ವಿರುದ್ಧ ದೂರಲು ಜತೀಂದ್ರ ಶೆಟ್ಟಿಯವರಿಗೆ ಯಾವುದೇ ಅಽಕಾರವಿಲ್ಲ. ಪರಿಶಿಷ್ಟ ಜಾತಿಯ ವ್ಯಕ್ತಿಯೋರ್ವರಿಗೆ ಜಾತಿ ನಿಂದನೆ ಮಾಡಿದ, ಹಲ್ಲೆ ಮಾಡಿದ ಕುರಿತು ನೀಡಿರುವ ಆರೋಪವು ಕುಯುಕ್ತಿಯಿಂದ ಮಾಡಿದ್ದಾಗಿರುತ್ತದೆ. ಸದ್ರಿ ವಿಷಯದಲ್ಲಿ ಪಂಚಾಯತ್‌ನ ಇತರರ ಮೇಲೂ ದೂರು ಆಗಿರುತ್ತದೆ. ಜತೀಂದ್ರ ಶೆಟ್ಟಿಯವರು ನನ್ನ ಜನಗಳ ಮೇಲೆ ಮಾತ್ರ ದೂರು ಆಗಿರುತ್ತದೆ ಎಂದು ತಪ್ಪಾಗಿ ಬಿಂಬಿಸಲು ಪ್ರಯತ್ನಿಸಿರುತ್ತಾರೆ. ಇದು ನನ್ನ ತೇಜೋವಧೆ ಮಾಡಲು ಮಾಡಿರುವ ಹತಾಶ ಪ್ರಯತ್ನವಾಗಿರುತ್ತದೆ ಸುಜಾತ ಆರ್. ರೈಯವರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.


ನಾನು ಜನಪ್ರತಿನಿಧಿಯಾಗಿದ್ದುಕೊಂಡು ಇದುವರೆಗೆ ಯಾವುದೇ ಅಽಕಾರ ದುರುಪಯೋಗವಾಗಲೀ, ಇನ್ನೊಬ್ಬರ ಮೇಲೆ ದ್ವೇಷ ಸಾಧನೆಯಾಗಲೀ ಮಾಡಿಲ್ಲ. ನಾನು ಓರ್ವ ಮಹಿಳೆಯಾಗಿದ್ದು, ನನ್ನ ಸಾರ್ವಜನಿಕ ಜೀವನದಲ್ಲಿ ನಾನು ಪ್ರಸ್ತುತ ಪಂಚಾಯತ್ ಅಧ್ಯಕ್ಷೆಯಾಗಿರುತ್ತೇನೆ. ಜತೀಂದ್ರ ಶೆಟ್ಟಿಯವರು ನನ್ನ ಮೇಲೆ ಸುಳ್ಳು ಸುಳ್ಳಾಗಿ ದೋಷಾರೋಪಣೆ ಮಾಡಿ ಪತ್ರಿಕೆಗಳಲ್ಲಿ ನನ್ನನ್ನು ತೇಜೋವಧೆ ಮಾಡಲು ಪ್ರಯತ್ನಿಸಿ ಸಾಧಿಸುವುದು ಏನು ಎಂಬುದು ನನಗೆ ತಿಳಿಯುತ್ತಿಲ್ಲ. ಜತೀಂದ್ರ ಶೆಟ್ಟಿಯವರು ರಾಜ್ಯದ ಚುನಾವಣಾಧಿಕಾರಿಗೆ ದೂರು ನೀಡಿರುವುದೇ ಆದಲ್ಲಿ ಚುನಾವಣಾಧಿಕಾರಿಯವರು ಈ ಕುರಿತು ಸೂಕ್ತ ವಿಚಾರಣೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಈ ಕುರಿತು ವಿಚಾರಣೆ ಎದುರಿಸದೇ ತಪ್ಪಿಸಿಕೊಳ್ಳುತ್ತೇನೆಂದು ಅವರು ನಿರೀಕ್ಷೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಇದು ಕೇವಲ ವೈಯಕ್ತಿಕ ದ್ವೇಷ, ರಾಜಕೀಯ ದುರುದ್ದೇಶದಿಂದ ಕೂಡಿದ ಆರೋಪವಾಗಿದ್ದು, ಇಂತಹ ನಿಷ್ಪ್ರಯೋಜಕ ಪ್ರಯತ್ನಗಳಿಂದ ಜತೀಂದ್ರ ಶೆಟ್ಟಿಯವರೇ ಹಾಸ್ಯಾಸ್ಪದವಾಗುತ್ತಾರೆ ಎಂದು ಸುಜಾತ ಆರ್. ರೈಯವರು ತಿಳಿಸಿದ್ದಾರೆ. ನ.1ರ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಸಂಬಂಧಿಸಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here