ಪುತ್ತೂರು ಕಡಬದ 120 ಶಿಕ್ಷಕರ ನೇಮಕ
ಪುತ್ತೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದ್ದು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಸರಕಾರ ದ.ಕ. ಜಿಲ್ಲೆಗೆ 346 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಪುತ್ತೂರು ತಾಲೂಕಿಗೆ 120 ಶಿಕ್ಷಕರನ್ನು ನೇಮಿಸಲಾಗಿದೆ. ತಾಲೂಕಿನ 20 ಮಂದಿ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ.
ಇರ್ದೆ ಗ್ರಾಮದ ಪಂಜೊಟ್ಟು ರಮೇಶ್ ರೈ ಪಿ. ಮತ್ತು ಶ್ರೀಮತಿ ಸೀತಾರತ್ನಾ ರೈ ದಂಪತಿ ಪುತ್ರಿ ಕು.ದೀಕ್ಷಾ ಪಿ. ಇವರು ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ವೆ ಇಲ್ಲಿಗೆ ಶಿಕ್ಷಕಿಯಾಗಿ ನೇಮಕಗೊಂಡಿರುತ್ತಾರೆ.
ಮಂಗಳೂರು ತಾಲೂಕು ದಿ| ರಮೇಶ್ ಹಾಗೂ ವನಿತಾರವರ ಪುತ್ರಿ, ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಚಂದ್ರಕಾಂತ್ ಉರ್ಲಾಂಡಿಯವರ ಪತ್ನಿ ನಮಿತಾ ಗೋಳಿದಡಿ ಸ. ಹಿ. ಪ್ರಾ. ಶಾಲೆಯ ಶಿಕ್ಷಕಿಯಾಗಿ, ಬೆಟ್ಟಂಪಾಡಿ ಗ್ರಾಮದ ನಿವೃತ್ತ ಶಿಕ್ಷಕರಾದ ಮಹಾಲಿಂಗ ನಾಯ್ಕ ಮತ್ತು ಶ್ರೀಮತಿ ಪುಷ್ಪಾ ದಂಪತಿಯ ಪುತ್ರಿ ರೇವತಿ. ಪಿ, ಬಳ್ಪ ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಗೆ, ಅರಿಯಡ್ಕ ಗ್ರಾಮದ ಪಾಪೆಮಜಲು ಪಿ ನಾರಾಯಣ ನಾಯ್ಕ ಮತ್ತು ಸುಶೀಲ ಪಿ ದಂಪತಿಯ ಪುತ್ರಿ ಕವಿತಾ ಪಿ. ಎನ್. ಕುರಿಯ ಸ. ಹಿ.ಪ್ರಾ. ಶಾಲೆಗೆ, ಕಡಬ ನೂಜಿಬಾಳ್ತಿಲ ಗ್ರಾಮದ ಸೋಮಪ್ಪ ರೈ ಮತ್ತು ಯಮುನಾ ದಂಪತಿ ಪುತ್ರಿ, ಮಂಚಿ ದಿನೇಶ್ ಶೆಟ್ಟಿ ಅವರ ಪತ್ನಿ ಸುಜಾತ, ಸ. ಹಿ. ಪ್ರಾ. ನೂಜಿಬಾಳ್ತಿಲ ಶಾಲೆಗೆ, ಸುಳ್ಯ ತಾಲೂಕಿನ ಜಿ. ಸಂಕಪ್ಪ ರೈ-ಸುಂದರಿ ರೈ ದಂಪತಿಗಳ ಪುತ್ರಿ, ಮುರುಳ್ಯ ಗ್ರಾಮದ ಓಟೋಳಿ ಶರತ್ ಕುಮಾರ್ ರೈಯವರ ಪತ್ನಿ ರೂಪ ರೈ ಸ. ಹಿ. ಪ್ರಾ. ಶಾಲೆ ಬೊಳಿಕಳ ಮಾಡಾವು ಇಲ್ಲಿಗೆ ಶಿಕ್ಷಕಿಯಾಗಿ ನೇಮಕಗೊಂಡಿದ್ದಾರೆ.
ಒಳಮೊಗರು ಗ್ರಾಮದ ಚನಿಯಪ್ಪ ನಾಯ್ಕರ ಮಗ ಕಿರಣ್‌ರಾಜ್ ಎಸ್ ಇವರು ಪಾಪೆಮಜಲು ಸ. ಹಿ. ಪ್ರಾ. ಶಾಲೆಗೆ ಆಂಗ್ಲ ಭಾಷಾ ಶಿಕ್ಷಕರಾಗಿ, ಪಡುವನ್ನೂರು ಗ್ರಾಮದ ಪಡುಮಲೆ ನಿವಾಸಿ ನೀರುಡೆ ದಿ.ಸಂಕು ಯಂ ಮತ್ತು ಪ್ರೇಮ ದಂಪತಿ ಪುತ್ರಿ ಪಡುಮಲೆ ಡಾ| ರವೀಶ್ ಪಡುಮಲೆ ಅವರ ಪತ್ನಿ ಸಾವಿತ್ರಿ ಸ. ಹಿ. ಪ್ರಾ. ಶಾಲೆ ಬಯಲು ಇಲ್ಲಿಗೆ, ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಊರುಸಾಗು ಗುಂಡ್ಲ ವಾಸುದೇವ ಗೌಡ. ಜಿ – ನೇತ್ರಾವತಿ. ಡಿ ದಂಪತಿಯ ಪುತ್ರಿ , ಕಡಬ ತಾಲೂಕು ಎಡಮಂಗಲ ಗ್ರಾಮದ ದೋಳ್ತಿಲ ಚೆನ್ನಕೇಶವ.ಡಿ ರವರ ಪತ್ನಿ ವೀಕ್ಷಿತಾ ಕಾಣಿಯೂರು ಹಿ. ಪ್ರಾ. ಶಾಲೆಗೆ, ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ನೆಕ್ಕಿಲಾರು ಕೃಷ್ಣಪ್ಪ ಗೌಡ ಮತ್ತು ಲಲಿತಾ ದಂಪತಿಯ ಪುತ್ರಿ, ಕೊಡಿಪ್ಪಾಡಿ ಗ್ರಾಮದ ಕೋಡಿಮೂಲೆ ಯೋಗೀಶ.ಕೆ. ಇವರ ಪತ್ನಿ ಶ್ರೀಮತಿ ಮಧುರ ಎನ್. ನೆಟ್ಟಾರು ಸ. ಹಿ.ಪ್ರಾ. ಶಾಲೆಗೆ, ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ ಸುಬ್ರಹ್ಮಣ್ಯ ಮತ್ತು ಸ್ವರ್ಣಲತಾ ದಂಪತಿಯ ಪುತ್ರಿ, ಬಲ್ನಾಡು ಗ್ರಾಮದ ಕಬ್ಬಿನ ಹಿತ್ತಿಲು ಚೇತನ್ ರಾಮ್ ಕೆ. ಇವರ ಪತ್ನಿ ಶ್ರೀಮತಿ ಸುಜಯ ಎ. ಎಸ್. ಸ. ಮಾ. ಉ. ಹಿ. ಪ್ರಾ. ಶಾಲೆ ಉಪ್ಪಿನಂಗಡಿಗೆ, ಕೊಳ್ತಿಗೆ ಗ್ರಾಮ, ಎಕ್ಕಡ್ಕ ಜಾಲಮನೆ ಕೃಷ್ಣಪ್ಪ ನಾಯ್ಕ ಹಾಗೂ ರತ್ನಾವತಿ ದಂಪತಿಯ ಪುತ್ರಿ ಕು.ಜಯಲಲಿತ, ಬೆಳ್ತಂಗಡಿ ಇಳಂತಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಅರಿಯಡ್ಕ ಗ್ರಾಮದ ಬೇಂಗತ್ತಡ್ಕ ಕೃಷ್ಣಕುಮಾರ್ ಹಾಗೂ ಭವಾನಿ ದಂಪತಿಯ ಪುತ್ರಿ, ಎಣ್ಮಕಜೆ ಗ್ರಾಮದ ಅಡ್ಕಸ್ಥಳ ರಾಮಾಜಿಗುರಿಯ ರಮೇಶ ಆರ್. ಇವರ ಪತ್ನಿ ಯಶೋದಾ ಬಿ.ಬಜತ್ತೂರು ಸ. ಹಿ. ಪ್ರಾ. ಶಾಲೆಗೆ, ಕಡಬ ಬಿಳಿನೆಲೆ ಗ್ರಾಮದ ಶಂಕರಪಾಟಾಳಿ ಮತ್ತು ಮಾಲತಿ ದಂಪತಿಯ ಪುತ್ರಿ, ಈಶ್ವರಮಂಗಲದ ರಾಜೇಶ್ ಡಿ ಇವರ ಪತ್ನಿ ಶ್ರೀಮತಿ ಶಿಲ್ಪಾರಾಣಿ ವೀರಮಂಗಲ ಸ. ಹಿ. ಪ್ರಾ. ಶಾಲೆಗೆ, ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸುಳ್ಯಪದವು ನಿವಾಸಿ ಜಯಪ್ರಕಾಶ್ ಕೆ ಸೀತಾಲಕ್ಷ್ಮಿ ದಂಪತಿಯ ಪುತ್ರಿ, ಕುಂಬಳೆ ಸೀತಾಂಗೊಳಿ ಗುರುರಾಜ್ ಸಿ ಎಸ್ ಅವರ ಪತ್ನಿ ಸ್ವಾತಿ ಪಾಪೆಮಜಲು ಸ.ಹಿ. ಪ್ರಾ. ಶಾಲೆಗೆ, ಪುತ್ತೂರು ಬೊಳುವಾರಿನ ಶಶಿಧರ ರಾವ್ ವಿ ಹಾಗೂ ಅರುಣಾ ಕುಮಾರಿ ಅವರ ಪುತ್ರಿ, ಕುಕ್ಕವು ಕಾರ್ತಿಕೇಯ ಅವರ ಪತ್ನಿ ಮೇದಿನಿ ಬೆಳ್ತಂಗಡಿ ಕಿಲ್ಲೂರು ಶಾಲೆಗೆ, ಮಾಡ್ನೂರು ಗ್ರಾಮದ ಕಾವು ಪಾಲಾಶತ್ತಡ್ಕ ನರಸಿಂಹ ಪ್ರಸಾದ ಪಿ.ಎಂ. ಹಾಗೂ ಈಶ್ವರಿ ದಂಪತಿಯವರ ಪುತ್ರಿ , ಕುಂಬಳೆ ಎಡನಾಡು ಗ್ರಾಮದ ಸರ್ವೇಶ ಶೇಂತಾರು ಇವರ ಪತ್ನಿ ಚೇತನಾ ಪಿ ., ಮಂಗಳೂರಿನ ಬೋಳಿಯಾರು ಮಸೀದಿ ಬಳಿಯ ಅಮೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಚಂದ ಪಾಟಾಳಿ ಮತ್ತು ಶ್ರೀಮತಿ ಸುಶೀಲ ದಂಪತಿಯ ಪುತ್ರಿ, ಈಶ್ವರಮಂಗಳ ಅನಂತ. ಕೆ ರವರ ಪತ್ನಿ ಶ್ರೀಮತಿ ಆಶಾಲತಾ ಎ. ರವರು ಸ. ಉ. ಹಿ. ಪ್ರಾ. ಶಾಲೆ ಮೇನಾಲ ಶಾಲೆಗೆ, ನರಿಮೊಗರು ಗ್ರಾಮದ ಆನಾಜೆ ನಾರಾಯಣ ಹೆಬ್ಬಾರ್-ಉಮಾ ಹೆಬ್ಬಾರ್ ದಂಪತಿ ಪುತ್ರ ಆದಿತ್ಯ ಹೆಬ್ಬಾರ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರುಗೆ, ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕಾಜಿಮಡ್ಕ ಕರಿಯಪ್ಪ ನಾಯ್ಕ ಸರಸ್ವತಿ ದಂಪತಿಯ ಪುತ್ರಿ ಒಳಮೊಗ್ರು ಗ್ರಾಮದ ಮುಂಡೋವು ಮೂಲೆ ಕರುಣಾಕರ ರವರ ಪತ್ನಿ ಪೂರ್ಣಿಮಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಶಾಲೆಗೆ, ಈಶ್ವರಮಂಗಲ ದ ಶ್ರೀಮತಿ ನಾಗವೇಣಿ ಮತ್ತು ಲವ ಗೌಡ ಕರ್ಪೂಡಿಕಾನ ದಂಪತಿ ಯ ಪುತ್ರಿ , ಚೇತನ ಕುಮಾರ್ ಬೊಮ್ಮೆಟ್ಟಿ ರವರ ಪತ್ನಿ ತೇಜಸ್ವಿನಿ ಕೆ . ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲಂತ್ಥಡ್ಕ ಕ್ಕೆ ಶಿಕ್ಷಕಿಯಾಗಿ ನೇಮಕಗೊಂಡಿದ್ದಾರೆ.