ಉಪ್ಪಿನಂಗಡಿ: ಇಲ್ಲಿನ ಪದಾಳದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2024ರಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ನ.5ರಂದು ಭಕ್ತರ ಸಭೆ ಕರೆದು ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಜಗದೀಶ್ ರಾವ್ ಮಣಿಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಜಯಗೋವಿಂದ ಶರ್ಮ, ಉಪಾಧ್ಯಕ್ಷರಾಗಿ ಪ್ರತಾಪ್ ಪೆರಿಯಡ್ಕ, ನಟೇಶ್ ಪೂಜಾರಿ ಪುಳಿತ್ತಡಿ, ಚಂದಪ್ಪ ಮೂಲ್ಯ, ಡಾ. ರಾಜಾರಾಮ್ ಕೆ.ಬಿ., ಶ್ರೀಮತಿ ಉಷಾ ಚಂದ್ರ ಮುಳಿಯ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಗೌಂಡತ್ತಿಗೆ, ಲಕ್ಷ್ಮಣ ನೆಡ್ಚಿಲ್, ಕೋಶಾಧಿಕಾರಿಯಾಗಿ ರಾಮಚಂದ್ರ ಮಣಿಯಾಣಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೇಶವ ನಾಯ್ಕ್ ಬೆತ್ತೋಡಿ, ಹೊನ್ನಪ್ಪ ಗೌಡ ವರೆಕ್ಕ, ವೆಂಕಟ್ರಮಣ ಭಟ್ ಆರ್ತಿಲ, ಜಗನ್ನಾಥ ಶೆಟ್ಟಿ ಕಜೆಕ್ಕಾರು, ಗಿರೀಶ ಆರ್ತಿಲ, ಪದ್ಮನಾಭ ಗೌಡ ಬಲ್ಯಾರಬೆಟ್ಟು, ಸುಚಿತ್ ಬೊಳ್ಳಾವು, ರವಿ ಕೊಪ್ಪಳ, ಈಶ್ವರ ನಾಯ್ಕ್ ಪೆರಿಯಡ್ಕ, ಪ್ರಸನ್ನ ಪೆರಿಯಡ್ಕ, ಹರಿಪ್ರಸಾದ್ ಭಟ್ ಕುವೆಚ್ಚಾರು, ಸುಬ್ರಾಯ ನಾಯಕ್ ಅಜಿರಾಳ ಹಾಗೂ ಆಡಳಿತ ಸಮಿತಿಯ ಎಲ್ಲಾ ಸದಸ್ಯರನ್ನು ನೇಮಕ ಮಾಡಲಾಯಿತು. ಆರ್ಥಿಕ ಸಮಿತಿಯ ಸಂಚಾಲಕರನ್ನಾಗಿ ಧರ್ನಪ್ಪ ನಾಯ್ಕ ಬೊಳ್ಳಾವು ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪೂರ್ಣವಾಗಿ ಪಾಳು ಬಿದ್ದು ಹೋಗಿದ್ದ ದೇವಸ್ಥಾನವಿದ್ದ ಈ ಜಾಗವನ್ನು ನನ್ನ ಅಣ್ಣ ದಿ.ನಡುಸಾರು ಜಯರಾಮ ಭಟ್ ಅವರು 1991ರಲ್ಲಿ ಖರೀದಿ ಮಾಡಿದ್ದರು. ಇಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಅಷ್ಟಮಂಗಳ ಪ್ರಶ್ನೆಯನ್ನಿಟ್ಟಾಗ ಇದು ಉಪ್ಪಿನಂಗಡಿಯ ಗ್ರಾಮ ದೇವಸ್ಥಾನವಾಗಿದೆ. ಆದ್ದರಿಂದ ಎಲ್ಲರನ್ನೂ ಸೇರಿಸಿಕೊಂಡು ಇದರ ಜೀರ್ಣೋದ್ಧಾರ ಮಾಡಬೇಕೆಂದು ತಿಳಿದುಬಂತು. ಅದರಂತೆ ಇಲ್ಲಿ ದೇವಸ್ಥಾನ ಪುನರ್ ನಿರ್ಮಾಣಗೊಂಡು 2009ರಲ್ಲಿ ಬ್ರಹ್ಮಕಲಶೋತ್ಸವ ನಡೆಸಲಾಯಿತು. ಅದಾಗಿ 14 ವರ್ಷವಾಗಿದ್ದು, ಈಗ ಮತ್ತೊಮ್ಮೆ ಬ್ರಹ್ಮಕಲಶ ನಡೆಸಬೇಕಾಗಿದೆ. ದೇವಸ್ಥಾನವಿರುವ ಈ ಜಾಗವನ್ನು ದೇವಸ್ಥಾನದ ಹೆಸರಿಗೆ ಈಗಾಗಲೇ ಮಾಡಲಾಗಿದೆ. ಬ್ರಹ್ಮಕಲಶಕ್ಕೆ ಸುಮಾರು 40ರಿಂದ 50 ಲಕ್ಷದ ನಿಧಿ ಸಂಗ್ರಹದ ಅಗತ್ಯವಿದ್ದು, ದೇವಾಲಯಕ್ಕೆ ಯಾವುದೇ ನಿತ್ಯ ವಿನಿಯೋಗದ ಆದಾಯಗಳಿಲ್ಲ. ಎಲ್ಲವೂ ಭಕ್ತರಿಂದ ಕ್ರೂಢೀಕರಣಗೊಂಡೇ ಆಗಬೇಕಾಗಿದೆ. ಈ ನಿಧಿ ಸಂಗ್ರಹಕ್ಕೆ ದೇವಸ್ಥಾನದ ವ್ಯಾಪ್ತಿಗೆ ಬರುವ ವಲಯಗಳನ್ನೇ ಮುಖ್ಯವಾಗಿ ಪರಿಗಣಿಸಲಾಗಿದೆ. ಈ ವಲಯದ ಪ್ರತಿ ಮನೆಯವರು ಈಗಿಂದಲೇ ಪ್ರತಿ ತಿಂಗಳು ಕನಿಷ್ಟ 500 ರೂಪಾಯಿಯಂತೆ ದೇವಾಲಯಕ್ಕೆಂದು ನೀಡುತ್ತಾ ಬಂದರೆ, ಬ್ರಹ್ಮಕಲಶೋತ್ಸವದ ಸಂದರ್ಭದ ನಿಧಿ ಕ್ರೂಢೀಕರಣಕ್ಕೆ ಅನುಕೂಲವಾಗುತ್ತದೆ. ಎಲ್ಲರ ಸಹಕಾರ- ಸಹಭಾಗಿತ್ವದಲ್ಲಿ ಈ ಪುಣ್ಯ ಕಾರ್ಯ ನಡೆಯಬೇಕೆಂದು ಹೇಳಿದರಲ್ಲದೆ, ನ.೨೧ರಂದು ಶ್ರೀ ದೇವಾಲಯದಲ್ಲಿ ಸ್ಥಳ ಪ್ರಶ್ನೆ ನಡೆಯಲಿದ್ದು, ಎಲ್ಲಾ ಭಕ್ತಾದಿಗಳು ಇದರಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆದು, ಭಕ್ತರ ಸಲಹೆ- ಸೂಚನೆಗಳನ್ನು ಪಡೆಯಲಾಯಿತು.
ವೇದಿಕೆಯಲ್ಲಿ ಆಡಳಿತ ಸಮಿತಿಯ ಉಪಾಧ್ಯಕ್ಷೆ ಶಾಂಭವಿ ರೈ, ಸದಸ್ಯ ಶಂಕರನಾರಾಯಣ ಭಟ್ ಬೊಳ್ಳಾವು ಉಪಸ್ಥಿತರಿದ್ದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಮಚಂದ್ರ ಮಣಿಯಾಣಿ, ಹರೀಶ್ವರ ಮೊಗ್ರಾಲ್, ಸುರೇಶ್ ಅತ್ರೆಮಜಲು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ್ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ನವೀನ್ ಕಲ್ಯಾಟೆ, ಅವನೀಶ್ ಭಟ್ ಪೆರಿಯಡ್ಕ, ರಾಮಣ್ಣ ಶೆಟ್ಟಿ, ಲಕ್ಷ್ಮಣ ಗೌಡ ನೆಡ್ಚಿಲ್, ಜತ್ತಪ್ಪ ನಾಯ್ಕ ಪ್ರಮುಖರಾದ ನಟೇಶ್ ಪೂಜಾರಿ, ಪ್ರಸನ್ನ ಪೆರಿಯಡ್ಕ, ರಾಧಾಕೃಷ್ಣ ಭಟ್ ಬೊಳ್ಳಾವು, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಸುರೇಶ್ ಗೌಂಡತ್ತಿಗೆ, ಮಹಾಲಿಂಗೇಶ್ವರ ಭಟ್, ಅಂಬಾಪ್ರಸಾದ್ ಪಾತಾಳ, ವಸಂತ ಕುಕ್ಕುಜೆ, ವನಿತಾ ಆರ್ತಿಲ, ತಿಮ್ಮಪ್ಪ ಬಂಡಾರಿ, ಲಕ್ಷ್ಮಣ ಗೌಡ ನೆಡ್ಚಿಲ್, ರಾಮಚಂದ್ರ ಗೌಡ ನೆಡ್ಚಿಲ್, ಪ್ರಶಾಂತ್ ಪೆರಿಯಡ್ಕ, ಚಿದಾನಂದ ಪಂಚೇರು, ಸುಜೀತ್ ಬೊಳ್ಳಾವು, ನಾರಾಯಣ ಭಟ್ ಪೆರಿಯಡ್ಕ ಮತ್ತಿತ್ತರರು ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಕಾರ್ಯದರ್ಶಿ ಕೇಶವ ರಂಗಾಜೆ ಸ್ವಾಗತಿಸಿ, ವಂದಿಸಿದರು.