ವಿವೇಕಾನಂದ ಕಾಲೇಜಿನಲ್ಲಿ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮ

0

ಪತ್ರಿಕೋದ್ಯದಲ್ಲಿ ಪ್ರಾಯೋಗಿಕವಾಗಿ ತೊಡಗಿಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯ: ರಾಕೇಶ್ ನಾಯಕ್


ಪುತ್ತೂರು: ಪತ್ರಿಕೋದ್ಯಮ ಶಿಕ್ಷಣ ಅಂದ್ರೇನೆ ವಿಭಿನ್ನ, ಇಲ್ಲಿ ಪ್ರಾಯೋಗಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಟಿವಿ9 ವೆಬ್ಸೈಟ್ ನ ಉಪ ಸಂಪಾದಕ ರಾಕೇಶ್ ನಾಯಕ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ನಡೆದ ಮೊದಲ ಪತ್ರಕರ್ತ ಮೇಷ್ಟ್ಟ್ರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಮಾಧ್ಯಮ ಲೋಕದಲ್ಲಿ ಹಲವಾರು ಅವಕಾಶಗಳಿವೆ, ಅದರಲ್ಲಿಯೂ ಮುದ್ರಣ ಮಾಧ್ಯಮದಲ್ಲಿ ಸಾಕಷ್ಟು ಸಾಧ್ಯತೆಗಳಿವೆ. ಜೋತೆಗೆ ಅನೇಕ ಪ್ರಚಲಿತ ಸುದ್ದಿಗಳಿಗೆ ಗಮನ ಹರಿಸುವುದು ಮುಖ್ಯ. ವೃತ್ತಿ ಜೀವನ ಇಲ್ಲಿ ಆರಂಭಿಸಿದರೆ ನಮ್ಮ ಬರವಣಿಗೆ, ಆಲೋಚನಾ ಶಕ್ತಿ ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ತಿಳಿಸುವುದರ ಜೊತೆಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಪ್ರಿಯ ಪಿ, ಸುತನ್ ಕೇವಳ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ನೀತ ರವೀಂದ್ರ ಸ್ವಾಗತಿಸಿ, ಹರಿಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here