ಇಂಟರ್‌ನ್ಯಾಷನಲ್ ಅಬಕಾಸ್ ಒಲಿಂಪಿಯಾಡ್‌ 2023-ಚಾಂಪಿಯನ್ ವಿದ್ಯಾರ್ಥಿಗಳಿಗೆ ವಿದ್ಯಾಮಾತಾ ವತಿಯಿಂದ ಅಭಿನಂದನೆ, ಪ್ರಶಸ್ತಿ ಪ್ರದಾನ

0

ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯ ಹಿಂದುಸ್ತಾನ್ ಕಾಂಪ್ಲೆಕ್ಸ್ ಇಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಮಹತ್ತರ ಮೈಲಿಗಲ್ಲನ್ನು ಸಾಧಿಸಿದೆ. ಇಂಟರ್‌ನ್ಯಾಷನಲ್ ಅಬಕಸ್ ಒಲಿಂಪಿಯಾಡ್-2023ನಲ್ಲಿ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, 16 ಸ್ಪರ್ಧಿಗಳು 100% ಅಂಕಗಳನ್ನು ಪಡೆಯುವ ಜೊತೆಗೆ ಚಾಂಪಿಯನ್‌ಶಿಪ್‌ನ್ನು ತನ್ನದಾಗಿಸಿಕೊಂಡಿದೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ -ಅಭಿನಂದನಾ ಸಮಾರಂಭ ಅಕಾಡೆಮಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ವಿದ್ಯಾಮಾತಾ ಸಂಸ್ಥೆ ಅಬಕಾಸ್ ಮತ್ತು ಅಗ್ನಿವೀರ ಎನ್ನುವ ಎರಡು ವಿಚಾರಗಳಿಗೆ ಪ್ರಸಿದ್ಧಿ ಪಡೆದಿದೆ. ಅಬಕಾಸ್ ನಲ್ಲಿ ಸಾಧಿಸಿದಷ್ಟೂ ಕಲಿಕೆ ಸುಲಭವಾಗುತ್ತದೆ. ಪೋಷಕರು ಮಕ್ಕಳಿಗೆ ಒತ್ತಡ ಹೇರಬೇಡಿ. ಮಕ್ಕಳ ಮಾನಸಿಕತೆಯನ್ನು ಅರ್ಥಮಾಡಿಕೊಂಡು ಬೆಳೆಸಬೇಕು. ವಿದ್ಯಾಮಾತಾದ ಜೊತೆಗೆ ನಾವೆಲ್ಲರೂ ಸದಾ ಇದ್ದೇವೆ. ನಾಲ್ಕೈದು ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಗುರು ಸತೀಶ್ ಆರ್. ಭಟ್ ಮಾತನಾಡಿ, ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಐಕ್ಯೂ ಟೆಸ್ಟ್ ಮಾಡುವ ಯಾವ ಮಾನದಂಡವೂ ಇಲ್ಲ. ಐಕ್ಯೂ ಟೆಸ್ಟ್ನಲ್ಲಿ ಕರ್ನಾಟಕ ಟಾಪ್ 10ರೊಳಗೆ ಇದೆಯಷ್ಟೇ ಆದರೆ ಟಾಪ್‌ನಲ್ಲಿ ಇಲ್ಲ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೋಕಸ್ ಕಡಿಮೆ ಇದೆ. ನಮ್ಮವರಿಗೆ ಬಹಳಷ್ಟು ಅವಕಾಶ ಇದೆ. ಈ ಬಗ್ಗೆ ಪೋಷಕರು ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ, ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪದವಿಯಲ್ಲಿ ಉತ್ತಮ ಫಲಿತಾಂಶ ಪಡೆದರೂ ಬ್ಯಾಂಕಿಗ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಿಲ್ಲ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ಪರರಾಜ್ಯದವರಿದ್ದಾರೆ. ಹೀಗಾಗಿ ನಮ್ಮ ಪೋಷಕರು ತಮ್ಮ ಮಕ್ಕಳು ಬ್ಯಾಂಕಿಂಗ್ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಬಹುದು. ವಿದ್ಯಾಮಾತಾ ಅಕಾಡೆಮಿಯಲ್ಲಿ ವ್ಯವಸ್ಥಿತ ತರಬೇತಿ ಸಿಗುತ್ತಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇಂಟರ್‌ನ್ಯಾಷನಲ್ ಅಬಕಾಸ್ ಒಲಿಂಪಿಯಾಡ್-2023ನಲ್ಲಿ ಎರಡನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಸುಪ್ರಭಂ ರೈಯವರ ತಂದೆ ಸುರೇಶ್ ರೈ, ತಾಯಿ ಭವ್ಯಶ್ರೀ ರೈ ಮಾತನಾಡಿ ತಮ್ಮ ಪುತ್ರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ತರಬೇತಿ ನೀಡಿದ ವಿದ್ಯಮಾತಾ ಅಕಾಡೆಮಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ಅಂತಾರಾಷ್ಟ್ರೀಯ ಅಬಕಾಸ್ ಒಲಿಂಪಿಯಾಡ್‌ನಲ್ಲಿ ಚಾಂಪಿಯನ್‌ಶಿಪ್ ಪಡೆದುದಕ್ಕಾಗಿ ಇಂಟರ್‌ನ್ಯಾಷನಲ್ ಅಬಕಾಸ್ ಅಕಾಡೆಮಿಯಿಂದ ಬಂದ ಟ್ರೋಫಿಯನ್ನು ಅತಿಥಿಗಳು ವಿದ್ಯಾಮಾತಾ ಅಕಾಡೆಮಿಯ ಪ್ರಾಂಶುಪಾಲೆ ರಮ್ಯಾ ಭಾಗ್ಯೇಶ್ ರೈಯವರಿಗೆ ಹಸ್ತಾಂತರಿಸಿದರು. ಅಕಾಡೆಮಿಯಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗೆ ಬೆಟ್ಟಂಪಾಡಿಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ , ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಅವರನ್ನು ಆಯ್ಕೆ ಮಾಡಿದ್ದು, ಪರೀಕ್ಷಾ ಪೂರ್ವತಯಾರಿಯ ಪುಸ್ತಕಗಳನ್ನು ವಿತರಿಸಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಶಶಿಕಲಾ, ವಿದ್ಯಾಮಾತಾ ಅಕಾಡೆಮಿಯ ಪ್ರಾಂಶುಪಾಲೆ ರಮ್ಯಾ ಭಾಗ್ಯೇಶ್ ರೈ, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಇಂಟರ್‌ನ್ಯಾಷನಲ್ ಅಬಕಾಸ್ ಒಲಿಂಪಿಯಾಡ್-2023ನಲ್ಲಿ ಎರಡನೇ ರ‍್ಯಾಂಕ್ ಪಡೆದ ಖ್ಯಾತ ನಟ ಸುರೇಶ್ ರೈ-ಭವ್ಯಶ್ರೀ ರೈ ದಂಪತಿಯ ಪುತ್ರ, ಬೆಂಗಳೂರಿನ ಡಫೋಡಿಲ್ಸ್ ಫೌಂಡೇಷನ್ ಆಫ್ ಲರ್ನಿಂಗ್ಸ್ ಸ್ಕೂಲ್‌ನ 6ನೇ ತರಗತಿ ವಿದ್ಯಾರ್ಥಿ ಸುಪ್ರಭಂ ರೈಯರನ್ನು ಟ್ರೋಫಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ಬೀರಿ ಕೋಟೆಕಾರ್‌ನ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅವಿಷ್ಕಾ ಸುವರ್ಣ ಕೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪುತ್ತೂರಿನ ಸುದಾನ ವಸತಿಯುತ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅನಿಶ್ ಎಂ.ಎಚ್., ಸಾಂದೀಪನಿ ಶಿಕ್ಷಣ ಸಂಸ್ಥೆ ನರಿಮೊಗರು 9ನೇ ತರಗತಿಯ ವಿದ್ಯಾರ್ಥಿನಿ ಧೃತಿ ಯು ರೈ, ಸಂಕೊಳಿಗೆ ಭಗವತಿ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಜಿಶಾನ್ ಎಸ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ವೈಷ್ಣವ್, ಸಾಂದೀಪನಿ ವಿದ್ಯಾಲಯ ನರಿಮೊಗರು 7ನೇ ತರಗತಿ ವಿದ್ಯಾರ್ಥಿ ನಿಶಾಂತ್ ಸಿ .ಜಿ, ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿ ಪ್ರಶಸ್ತ್ ಪ್ರಕಾಶ, ಅಂಬಿಕಾ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿ ಇಂಚರಮಯ್ಯ 100% ಫಲಿತಾಂಶ ಪಡೆದಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ಅನುದಾನಿತ ಜೂನಿಯರ್ ಶಾಲೆ ಪುತ್ತಿಗೆಯ 3ನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಶೆಟ್ಟಿ, ಚೆನ್ನೆöÊನ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ನ 6ನೇ ತರಗತಿಯ ವಿದ್ಯಾರ್ಥಿನಿ ಅನ್ವಿತಾ ದೀಪಕ್ ಶೆಟ್ಟಿ, ಮಂಗಳೂರು ಆಸ್ಸಿಸಿ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿ ಸೋಹನ್ ಯು.ಕೆ., ಲಂಡನ್‌ನ ಮಾರ್ಶಗೇಟ್ ಪ್ರೈಮರಿ ಸ್ಕೂಲ್‌ನ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಥರ್ವ್ ಶೆಟ್ಟಿ, ಅಂಬಿಕ ವಿದ್ಯಾಲಯದಲ್ಲಿ 4ನೇ ತರಗತಿಯ ವಿದ್ಯಾರ್ಥಿನಿ ಶ್ರೀಯಾ ವಿ.ಎಂ. ಉತ್ತೀಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮದ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅನುದೀಪ್ ರೈ, ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿ ಸ್ವೀನಲ್ ಡಿಸಿಲ್ವ ಉತ್ತೀರ್ಣರಾಗಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ, ಸ್ಮರಣಿಕೆ, ವಿದ್ಯಾಮಾತಾ ಪದಕ, ಟ್ರೋಫಿ ನೀಡಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here