ಬೆಟ್ಟಂಪಾಡಿ: ‘ಶಿಲಾ ಬಾಲಿಕೆ’ಯ ವಿಭಿನ್ನ ರೀತಿಯ ಛದ್ಮವೇಷ ಪಾತ್ರಧಾರಿ ಪ್ರತಿಭೆಯೋರ್ವಳು ಪ್ರೇಕ್ಷಕರ ಮನಗೆದ್ದಳು. ಹೌದು ಇಂತಹುದೊಂದು ಛದ್ಮವೇಷದ ಮೂಲಕ ಪ್ರಥಮ ಸ್ಥಾನ ಗಳಿಸಿದ ಪ್ರತಿಭೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಐಶಾನಿ ರೈ ಸೂರಂಬೈಲುರವರು.
ನ.6ರಂದು ಕಕ್ಕೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 1-4 ತರಗತಿ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಐಶಾನಿಯವರು ‘ಶಿಲಾಬಾಲಿಕೆ’ ಛದ್ಮವೇಷ ಧರಿಸಿದರು. ವಿಭಿನ್ನ ಭಂಗಿಯಲ್ಲಿ ಈಕೆ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದರು. ಈಕೆ ಸೂರಂಬೈಲು ಪ್ರಸಾದ್ ರೈ ಮತ್ತು ಮಮತಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಪ್ರಿಯದರ್ಶಿನಿ ಶಾಲಾ ಚಿತ್ರಕಲಾ ಶಿಕ್ಷಕ ವಿಪಿನ್ ರವರಿಂದ ಮಾರ್ಗದರ್ಶನ ಪಡೆದುಕೊಂಡಿರುತ್ತಾರೆ.