ರಾಮಕುಂಜ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಶ್ರೀ ರಾಮಕುಂಜೇಶ್ವರ ಅನುದಾನಿತ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಕುಂಜೇಶ್ವರ ಅನುದಾನಿತ ಸಂಸ್ಕೃತ ಹಿ.ಪ್ರಾ.ಶಾಲೆಯಲ್ಲಿ ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಪ್ರಾಥಮಿಕ ಕಿರಿಯ ವಿಭಾಗದಲ್ಲಿ ಸಾನ್ವಿ ಎಂ.ಜಿ.ಭಟ್ (4ನೇ) ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ (ಪ್ರಥಮ), ಆದ್ಯ ಡಿ.ಇ(4ನೇ )ಕ್ಲೇ ಮಾಡಲಿಂಗ್ (ಪ್ರಥಮ), ಆರಾಧ್ಯ ಆರ್.ಕೆ (4ನೇ) ಭಕ್ತಿಗೀತೆ(ಪ್ರಥಮ), ವನ್ಯ ಪಿ.ಎನ್ (4ನೇ) ಕನ್ನಡ ಕಂಠಪಾಠ ದ್ವಿತೀಯ, ಆರಾಧ್ಯ ಆರ್.ಕೆ (4ನೇ) ಇಂಗ್ಲಿಷ್ ಕಂಠಪಾಠ ದ್ವಿತೀಯ, ಸಾನ್ವಿ ಎಂ.ಜಿ.ಭಟ್ (4ನೇ) ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ, ಅದ್ವಿಕಾ ಬಿ(2ನೇ) ಅಭಿನಯ ಗೀತೆ ದ್ವಿತೀಯ, ಮಾನ್ವಿ.ಆರ್ ರೈ (3ನೇ) ಕಥೆ ಹೇಳುವುದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಹಿರಿಯ ವಿಭಾಗದಲ್ಲಿ ವಿವೇಕ್ ಎಸ್(7ನೇ) ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ(ಪ್ರಥಮ), ದೃತಿ ಕೆ.ಎ(5ನೇ)ಅಭಿನಯಗೀತೆ(ಪ್ರಥಮ), ಎಂ.ಜೆ.ಸುಜ್ಙಾ(7ನೇ)ತುಳುಕಂಠಪಾಠ (ಪ್ರಥಮ), ತಾನ್ಯ ಪಿ.(7ನೇ) ಕನ್ನಡ ಕಂಠಪಾಠ ದ್ವಿತೀಯ, ಮಾನ್ಯಶ್ರೀ(7ನೇ) ಇಂಗ್ಲಿಷ್‌ಕಂಠಪಾಠ ದ್ವಿತೀಯ, ಸುಮುಖ ಎಸ್(7ನೇ)ಹಿಂದಿ ಕಂಠಪಾಠ ದ್ವಿತೀಯ, ಸ್ನಿಗ್ದಾ(6ನೇ)ಲಘುಸಂಗೀತ ದ್ವಿತೀಯ, ಮಿಲನ್ ದಿನೇಶ್ ಪೂಜಾರಿ(7ನೇ) ಕ್ಲೇ ಮಾಡಲಿಂಗ್ ದ್ವಿತೀಯ, ಆರಾಧ್ಯ ಓ.ಆರ್. ಭಕ್ತಿಗೀತೆ ದ್ವಿತೀಯ, ಶ್ರೇಷ್ಠ ಪಿ.ವಿ(7ನೇ)ಮಿಮಿಕ್ರಿ ದ್ವಿತೀಯ, ಹನಿಶ್ರೀ ಎಸ್.ಹೆಚ್.(7ನೇ)ಕಥೆ ಹೇಳುವುದು(ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ವ್ಯವಸ್ಥಾಪಕರಾದ ರಮೇಶ್ ರೈ ಆರ್.ಬಿ, ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಲೋಹಿತಾ ಎ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ತರಬೇತಿ ನೀಡಿದ್ದರು.