ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ದೀಪಾವಳಿ ಸಂಭ್ರಮಾಚರಣೆ

0

ಗೋ ಪೂಜೆ
ಬಲಿಯೇಂದ್ರ ಪೂಜೆ

ಪುಣಚ : ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಆಚರಣೆ ಸಂಭ್ರಮ ಸಡಗರದಿಂದ ನ.15ರಂದು ನಡೆಯಿತು.

ಶಾಲಾ ವಿದ್ಯಾರ್ಥಿಗಳಿಂದ ಭಜನೆ, ಗೋಪೂಜೆ, ಬಲಿಯೇಂದ್ರ ಪೂಜೆ, ಬೆಳಕಿನ ದೀಪದ ಹಾಡಿನೊಂದಿಗೆ ಅಖಂಡ ಭಾರತದ ಚಿತ್ರಣಕ್ಕೆ ದೀಪ ಬೆಳಗಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀದೇವಿ ವಿದ್ಯಾ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ‌ ಮಾತನಾಡಿ ವಿಶ್ವದಲ್ಲಿ ಭಾರತ ಶ್ರೇಷ್ಠವಾದ ರಾಷ್ಟ್ರ. ಚಂದ್ರಯಾನ 3 ಯಶಸ್ವಿ ಕಾರ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿ ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಇಂತಹ ಭಾರತಾಂಬೆಯ ಪುಣ್ಯಭೂಮಿಯಲ್ಲಿ ಗೋವುಗಳ ಪಾಲನೆ, ಸಂರಕ್ಷಣೆ ಮಾಡಿ ಸಾಮೂಹಿಕ ಗೋಪೂಜೆ ಮಾಡುವ ಮುಖಾಂತರ ದೀಪಾವಳಿ ಆಚರಣೆ ಮನ ಮನೆಯಲ್ಲಿ ಬೆಳಗಲಿ ಎಂದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಪ್ರಾಂತ್ಯ ಗೋ ಸಂಯೋಜಕ ಪ್ರವೀಣ್ ಸರಳಾಯ ಮಾತನಾಡಿ ಗೋವಿನ ಪಾಲನೆ, ತಳಿಗಳ ಸಂರಕ್ಷಣೆ ಮತ್ತು ಅದರ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.ಖ್ಯಾತ ತುಳು ಸಾಹಿತಿ ರಾಜಶ್ರೀ ಟಿ. ರೈ ಪೆರ್ಲ ಮಾತನಾಡಿ ತುಳುನಾಡಿನ ಸಂಸ್ಕೃತಿ, ದೀಪಾವಳಿ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.


ಆಡಳಿತ ಸಮಿತಿಯ ಕಾರ್ಯದರ್ಶಿ ರವೀಶ್ ಪೊಸವಳಿಕೆ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರಜನಿ ಕೋಟ್ರೇಶ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಲೋಕೇಶ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ರವೀಶ್ ಪೊಸವಳಿಕೆ ಅತಿಥಿ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.


ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ರಜನಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಲೋಕೇಶ್ ಎಸ್. ಧನ್ಯವಾದ ಸಮರ್ಪಿಸಿದರು.ಶಿಕ್ಷಕ ವಿನೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಶಾಂತಿ ಮಂತ್ರ, ಪ್ರಸಾದ ವಿತರಣೆ ನಡೆಯಿತು.ಕಾರ್ಯಕ್ರಮದ ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು.
ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು, ಶಿಕ್ಷಕರು,ಶಿಕ್ಷಕೇತರರು, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.



LEAVE A REPLY

Please enter your comment!
Please enter your name here