ಪುತ್ತೂರು: ದೇಶದ ಪರವಾಗಿ ಕೆಲಸ ಮಾಡುವ ಹಿಂದುಗಳಿಗೆ ದೇಶದಲ್ಲಿ ರಕ್ಷಣೆ ಇಲ್ಲದ ರೀತಿಯಲ್ಲಿ ಘಟನೆ ನಡೆಯುತ್ತಿದೆ. 4 ಗೋಡೆಯ ಮಧ್ಯೆ ಕುಳಿತ ಅಸಿಸ್ಟೆಂಟ್ ಕಮೀಷನರ್ ಒಮ್ಮೆ ಹೊರ ಜಗತ್ತನ್ನು ನೋಡಬೇಕು. ಯಾವುದೇ ಕೇಸ್ ಇಲ್ಲದ ನಮ್ಮ ಕಾರ್ಯಕರ್ತರ ಗಡಿಪಾರು ಮಾಡಿರುವುದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಬಜರಂಗದಳ ಯಾವುದೇ ಹೋರಾಟಕ್ಕೂ ಸಿದ್ದ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ಆಕ್ರೋಶ ವ್ಯಕ್ಯಪಡಿಸಿದರು.
ಬಜರಂಗದಳದ ಕಾರ್ಯಕರ್ತರ ಮೇಲೆ ಗಡಿಪಾರು ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ನ.20 ರಂದು ತಾಲೂಕು ಆಡಳಿತ ಸೌಧದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಗಡಿಪಾರು ಮಾಡಿರುವ ನೋಟಿಸ್ ನೀಡಿದ ಸಹಾಯಕ ಕಮೀಷನರ್ ಇದನ್ನು ಮರು ಪರಿಶೀಲಿಸಬೇಕೆಂದು ಹೇಳಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ನಗರ ಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮೋಹಿನಿ ದಿವಾಕರ್, ಸುಕೀರ್ತಿ, ಜಯಲಕ್ಷ್ಮಿ, ಶ್ರೀಧರ್ ತೆಂಕಿಲ ಸಹಿತ ಹಲವಾರು ಮುಖಂಡರು ಉಪಸ್ಥಿತರಿದ್ದರು. ಪ್ರತಿಭಟನೆ ಬಳಿಕ ಸಹಾಯಕ ಕಮೀಷನರ್ ಗೆ ಮನವಿ ಸಲ್ಲಿಸಲಾಯಿತು.