ಮಂಗಳೂರು, ಶಿವಮೊಗ್ಗ ವಿಭಾಗದ ನಗರಸಭಾ ಸದಸ್ಯರ ಪ್ರಶಿಕ್ಷಣ ವರ್ಗ-ಪುತ್ತೂರು ನಗರಸಭೆಯ ಕಾರ್ಯಸಾಧನೆಗೆ ಮೆಚ್ಚುಗೆ

0

ಪುತ್ತೂರು: ಬಿಜೆಪಿಯಿಂದ ಮಂಗಳೂರು ಸಂಘನಿಕೇತನದಲ್ಲಿ ನ.21ರಂದು ಆಯೋಜಿಸಿದ ಮಂಗಳೂರು ಮತ್ತು ಶಿವಮೊಗ್ಗ ವಿಭಾಗದ ನಗರಸಭಾ ಸದಸ್ಯರ ಪ್ರಶಿಕ್ಷಣ ವರ್ಗದಲ್ಲಿ ಪುತ್ತೂರು ನಗರಸಭೆಯ ವಿವಿಧ ಕಾರ್ಯಯೋಜನೆಯನ್ನು ಚಿತ್ರ ಸಹಿತ ಪ್ರದರ್ಶನಕ್ಕೆ ಇಟ್ಟು ಇತರರಿಗೆ ಮಾದರಿಯಾಗಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.


ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಲ್ಲಿ ಬಹುನಿರೀಕ್ಷಿತ ಎಪಿಎಂಸಿ ರೈಲ್ವೇ ಅಂಡರ್ ಪಾಸ್, ಹಾರಾಡಿರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿ, ಸ್ಮಾರ್ಟ್ ಬಸ್ ಪ್ರಯಾಣಿಕರ ತಂಗುದಾಣ, ಅಲ್ಲಲ್ಲಿ ಉದ್ಯಾನವನ, ಜಲಸಿರಿ ಯೋಜನೆ, ಸ್ವಚ್ಚತೆ ಸಹಿತ ಎಲ್ಲಾ ವಾರ್ಡ್‌ಗಳಿಗೆ ಸಿಸಿ ರೋಡ್‌ಗಳ ಕಾರ್ಯಗಳ ಕುರಿತು ಪ್ರಶಿಕ್ಷಣ ಅವಧಿಯಲ್ಲಿ ಮಾಹಿತಿ ನೀಡಿ ಕಟೌಟ್ ಚಿತ್ರಗಳ ಮೂಲಕ ಪ್ರದರ್ಶನ ನೀಡಲಾಯಿತು. ಪುತ್ತೂರು ನಗರಸಭೆ ಎಲ್ಲರಿಗೂ ಮಾದರಿ ಎಂದು ಅವಧಿಯಲ್ಲಿ ಮಾಹಿತಿ ನೀಡಲಾಗಿದೆ.


ಬಿಜೆಪಿ ರಾಜ್ಯ ನಿಕಟಪೂರ್ವ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿ ಜನಸಂಘದಿಂದ ಇಲ್ಲಿಯ ತನಕ ಬೆಳೆದು ಬಂದಿರುವ ಬಿಜೆಪಿ ಸಿದ್ಧಾಂತ ಮತ್ತು ಕಾರ್ಯ ಪದ್ಧತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ರಾಷ್ಟ್ರವನ್ನು ಪರಮವೈಭವದ ಎಡೆಗೆ ಒಯ್ಯುವುದೇ ಬಿಜೆಪಿಯ ಗುರಿ ಎಂದರು. ಪ್ರಶಿಕ್ಷಣ ವರ್ಗದ ರಾಜ್ಯ ಸಂಚಾಲಕ ಶ್ರೀಕಾಂತ್ ಕುಲಕರ್ಣಿ, ಬಿಜೆಪಿ ಜಿಲ್ಲಧ್ಯಕ್ಷ ಸುದರ್ಶನ ಮೂಡಬಿದ್ರೆ, ರಾಷ್ಟ್ರೀಯ ಪ್ರಶಿಕ್ಷಣ ಪ್ರಮುಖ್ ರವೀಂದ್ರ, ರಾಜ್ಯ ಪ್ರಕೋಷ್ಠದ ಸಹ ಸಂಚಾಲಕಿ ಡಾ. ಮಂಜುಳಾ ರಾವ್, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಶಾಸಕರಾದ ಉಮಾನಾಥ್ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ತಿಲಕ್‌ರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಕಾರ್ಯದಶಿ ಭರತ್ ಕುಮಾರ್ ಉಪಸ್ಥಿತರಿದ್ದರು. ಪುತ್ತೂರು ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷ ವಿದ್ಯಾ ಗೌರಿ, ಸದಸ್ಯರಾದ ಪಿ.ಜಿ.ಜಗನ್ನಿವಸ ರಾವ್, ಪ್ರೇಮ್, ಪದ್ಮನಾಭ ಪಡೀಲ್, ಮೋಹಿನಿ ವಿಶ್ವನಾಥ್, ಮಮತಾ ರಂಜನ್, ಶಶಿಕಲಾ ಸಿ.ಎಸ್, ದೀಕ್ಷಾ ಪೈ, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಪೂರ್ಣಿಮಾ, ಇಂದಿರಾ ಪುರುಷೋತ್ತಮ ಪ್ರಶಿಕ್ಷಣದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here