ಪುತ್ತೂರು: ಯಾವುದೋ ಪೂರ್ವಗ್ರಹ ಪೀಡಿತರಾಗಿ ಅಮಲೇರಿಸಿಕೊಂಡ ಹಾಗೇ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಅಮಳ ರಾಮಚಂದ್ರರು ನಿಲ್ಲಿಸಬೇಕು ಎಂದು ಬಿಜೆಪಿ ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ತಿಳಿಸಿದ್ದಾರೆ.
ಮಾಜಿ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದಲ್ಲದೆ, ಬಿಜೆಪಿ ಮಂಡಲದ ಅಧ್ಯಕ್ಷರು ಹಾಗು ಅವರ ಪಟಾಲಂ ಎಂದು ಉಲ್ಲೇಖಿಸಿದಕ್ಕೆ ನಿತೀಶ್ ಕುಮಾರ್ ಅವರು ಪ್ರತಿತಿಕ್ರಿಯಿಸಿದ್ದು, ಏನೋ ರಾಜ್ಯದ ವಕ್ತಾರ ಹುದ್ದೆ ನೀಡಿದ್ದಾರೆ ಎಂದು ಬಾಯಿಚಪಲಕ್ಕೆ ಇಂಥ ಆರೋಪ ಮಾಡುವುದನ್ನು ಬಿಟ್ಪು ನಿಮ್ಮಲ್ಲಿ ಏನಾದ್ರೂ ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಹಾಕಿದ ಕೇಸ್ ಇರುವ ಕಾರ್ಯಕರ್ತರನ್ನು ಗಡಿಪಾರಿಗೆ ನೋಟೀಸ್ ನೀಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಚುನಾವಣೆ ಘೋಷಣೆ ಆದ ನಂತರ ಆಗಿರುವ ಕೇಸಿನ ಮೇಲೆ ಗಡಿಪಾರು ನೋಟೀಸ್ ನೀಡಿದಾರೆಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಅದಲ್ಲದೆ ಹಿಂದೂಗಳ ಭಾವನೆಗಳಿಗೆ ನೋವಾದಾಗ ಪ್ರತಿಭಟಿಸಿದ ಕಾರ್ಯಕರ್ತರಿಗೆ ಸಮಾಜದ್ರೋಹಿಗಳು ಎಂದು ಪಟ್ಟಕಟ್ಟಿರುವುದು ನಿಮ್ಮ ಮಾನಸಿಕತೆ ಎಂತಹದು.
ಬಿಜೆಪಿ ಮುಗ್ಧ ಕಾರ್ಯಕರ್ತರನ್ನು ದಾರಿತಪ್ಪಿಸುತ್ತದೆ ಎಂದು ಹೇಳುವ ನೀವು ಕೆ.ಜೆ ಹಳ್ಳಿ ಡಿ.ಜೆ ಹಳ್ಳಿಯಲ್ಲಿ ನಿಮ್ಮದೇ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಗೆ ನಿಮ್ಮದೇ ಪಕ್ಷದ ಬ್ರದರ್ಸ್ ಗಳು ಬೆಂಕಿ ಹಚ್ಚಿದಾಗ ನಿಮ್ಮ ಮುಗ್ದತೆಯ ಪಾಠವನ್ನು ರಾಜ್ಯ ವಕ್ತಾರಾಗಿರುವ ನೀವು ಅವರಿಗೆ ಹೇಳಿ. ಅದು ಬಿಟ್ಟು ಪರಿವಾರ ಸಂಘಟನೆಯ ಕಾರ್ಯಕರ್ತರಿಗೆ ನಿಮ್ಮ ಭೋದನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೇಗೋ ಹಿಂದೆ ಇದ್ದ ಪಟಾಲಂನ್ನು ದೂರ ಮಾಡಿ ಹಾಲಿ ಶಾಸಕರ ಪಟಾಲಂನಲ್ಲಿ ಸೇರಿಕೊಂಡಿದ್ದೀರಿ. ಸರಕಾರ ಬಂದು ಆರು ತಿಂಗಳು ಕಳೆದಿದೆ ಎಲ್ಲಾದರೂ ನೂರು ಮೀಟರಿನಷ್ಟು ರಸ್ತೆ ಮಾಡಿಸಲು ನಿಮ್ಮ ಶಾಸಕರಲ್ಲಿ ಒತ್ತಡ ಹಾಕಿ. ಈ ಹಿಂದಿನ ಶಾಸಕರು ಮಾಡಿದ ಅಭಿವೃದ್ಧಿಯ ಕೆಲಸಕ್ಕೆ ಟೇಪ್ ಕತ್ತರಿಸುವುದನ್ನು ನಿಲ್ಲಿಸಲು ಹೇಳಿ. ಪುತ್ತೂರಿನ ಜನತೆಗೆ ಹೇಳುವಂತ ಕೆಲಸಗಳು ಯಾವುದು ಇಲ್ಲದ ಕಾರಣ ಹಿಂದಿನ ಶಾಸಕರ ಬಗ್ಗೆ ಇಲ್ಲಸಲ್ಲದ ಹೇಳಿಕೆಯನ್ನು ನೀವು ಮುಂದುವರಿಸುದು ನೋಡುವಾಗ ನೀವು ಮತ್ತು ನಿಮ್ಮ ಪಕ್ಷ ಬೌದ್ಧಿಕ ದಿವಾಳಿಯ ಅಂಚಿಗೆ ಬಂದು ತಲುಪಿದ್ದೀರಿ ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.