





ರಾಮಕುಂಜ: ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ರಾಮಪ್ಪ ಪೂಜಾರಿ(89ವ.)ರವರು ಅನಾರೋಗ್ಯದಿಂದ ನ.24ರಂದು ಬೆಳಿಗ್ಗೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅದರ್ಕಳದಲ್ಲಿರುವ ಪುತ್ರಿ ಸೌಮ್ಯಯುವರಾಜ್‌ರವರ ಮನೆಯಲ್ಲಿ ನಿಧನರಾದರು.


ರಾಮಪ್ಪ ಪೂಜಾರಿಯವರು ಪ್ರಗತಿಪರ ಕೃಷಿಕರಾಗಿದ್ದು ಕುಟುಂಬದ ಯಜಮಾನರಾಗಿದ್ದರು. ಮೃತರು ಪತ್ನಿ ಗಿರಿಜಾ, ಪುತ್ರರಾದ ರವಿ, ಮಹಾಬಲ, ಆನಂದ, ಸುರೇಶ, ಪುತ್ರಿಯರಾದ ರೇವತಿ, ಪುಷ್ಪಾ, ಸೌಮ್ಯ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.













