




ಪುತ್ತೂರು: ಮಂದಾರ ಬಳಗ ಕುಂಬ್ರ ವತಿಯಿಂದ ‘ಮಂದಾರ’ ಪ್ರಶಸ್ತಿ ಪ್ರದಾನ ಸಮಾರಂಭ -2023 ಹಾಗೂ ‘ ಅಮ್ಮೆರ್’ ತುಳು ನಾಟಕ ಪ್ರದರ್ಶನ ನ.30 ರಂದು ಕುಂಬ್ರ ಶ್ರೀರಾಮಗಿರಿಯ ಶ್ರೀ ಭಜನಾ ಮಂದಿರದ ಸಭಾ ಮಂಟಪದಲ್ಲಿ ನಡೆಯಲಿದೆ. ಸಂಜೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಉದ್ಯಮಿ ಬೂಡಿಯಾರು ರಾಧಾಕೃಷ್ಣ ರೈ ಸಬಾಧ್ಯಕ್ಷತೆ ವಹಿಸಲಿದ್ದಾರೆ.



ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈಯವರು ಸಾಧಕರನ್ನು ಸನ್ಮಾನಿಸಿ,ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಕುಂಬ್ರ ಪಂಚಮಿ ಗ್ರೂಪ್ಸ್ನ ಮಿತ್ರಂಪಾಡಿ ಜಯರಾಮ ರೈ, ಅಕ್ಷಯ ಗ್ರೂಪ್ಸ್ನ ಜಯಂತ ನಡುಬೈಲ್,ಕಲಾಪೋಷಕ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಎಂಆರ್ಪಿಎಲ್ ಅಧಿಕಾರಿ ಸೀತಾರಾಮ ರೈ ಕೈಕಾರ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಪದ್ಮಶ್ರೀ ಸೋಲಾರ್ನ ಸೀತಾರಾಮ ರೈ ಕೆದಂಬಾಡಿಗುತ್ತು, ಪುತ್ತೂರು ವಿಜಯ ಸಾಮ್ರಾಟ್ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ ಮಾಲಕ ಮೋಹನದಾಸ ರೈ ಕುಂಬ್ರ ಭಾಗವಹಿಸಲಿದ್ದಾರೆ. ಮಂದಾರ ಬಳಗದ ಮಾರ್ಗದರ್ಶಕ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ, ಕುಂಬ್ರ ಬಾಂದಲಪ್ಪು ಜನ ಸೇವಾ ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು, ಕುಂಬ್ರ ವಿಶ್ವ ಯುವಕ ಮಂಡಲದ ಅಧ್ಯಕ್ಷ ಅಶೋಕ್ ಪೂಜಾರಿ ಬಡೆಕ್ಕೋಡಿ ಭಾಗವಹಿಸಲಿದ್ದಾರೆ.





ಮಂದಾರ ಪ್ರಶಸ್ತಿ-2023 ಪುರಸ್ಕೃತಗೊಳ್ಳುವವರು
ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ‘ಮಂದಾರ’ಪ್ರಶಸ್ತಿ 2023 ಪುರಸ್ಕೃತಗೊಳ್ಳಲಿರುವ ಸಾಧಕರು ಸಮಾಜ ಸೇವೆಯಲ್ಲಿ ರವೀಂದ್ರ ಶೆಟ್ಟಿ ನುಳಿಯಾಲು, ಪರಿಸರ ಸಂರಕ್ಷಣೆಯಲ್ಲಿ ಡಾ| ಆರ್.ಕೆ ನಾಯರ್ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಭಾಗ್ಯೇಶ್ ರೈಯವರುಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅಮ್ಮೆರ್ ತುಳು ಹಾಸ್ಯಮಯ ನಾಟಕ
ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ದೀಪಕ್ ರೈ ಪಾಣಾಜೆ ನಟನೆಯ ರಂಗದ ರಾಜೆ ಸುಂದರ ರೈ ಮಂದಾರ ನಿರ್ದೇಶಿಸಿ, ಅಭಿನಯಿಸಿರುವ ‘ ಅಮ್ಮೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಾರ ಬಳಗದ ಪ್ರಕಟಣೆ ತಿಳಿಸಿದೆ.





