ನುಳಿಯಾಲು ತರವಾಡು ಬಾರಿಕೆ ಮನೆಯಲ್ಲಿ -ಪರ್ಬ ತಂಬಿಲ-ಸನ್ಮಾನ-ಬಲೀಂದ್ರ ಪೂಜೆ

0

ಪುತ್ತೂರು: ನುಳಿಯಾಲು ತರವಾಡು ಬಾರಿಕೆ ಮನೆಯಲ್ಲಿ ಕುಟುಂಬಿಕರು ಮತ್ತು ಬಂಧುಗಳ ಒಟ್ಟು ಸೇರುವಿಕೆಯಲ್ಲಿ ದೀಪಾವಳಿ ಆಚರಣೆಯನ್ನು ವಿಧಿಪೂರ್ವಕವಾಗಿ, ಕುಟುಂಬದ ಯಜಮಾನರೂ,ಟ್ರಸ್ಟ್ ನ ಅಧ್ಯಕ್ಷರೂ ಆದ ಜಗನ್ನಾಥ ರೈ, ನುಳಿಯಾಲು ಅವರ ನೇತೃತ್ವದೊಂದಿಗೆ ಸಂಭ್ರಮ, ಸಡಗರ ಗಳೊಂದಿಗೆ ಆಚರಿಸಲಾಯಿತು.

ಮೊದಲಿಗೆ ಧರ್ಮ ಚಾವಡಿಯಲ್ಲಿ ಧರ್ಮದೈವ ಬೀರ್ಣಾಳ್ವ ದೈವಕ್ಕೆ ತಂಬಿಲ ಹಾಗೂ ನಂತರ ಸಮಸ್ತ ಪರಿವಾರ ದೈವಗಳಿಗೆ ಆಯಾಯ ಸಾನ್ನಿಧ್ಯಗಳಲ್ಲಿ ತಂಬಿಲ ಸೇವೆಗಳೊಂದಿಗೆ ಯಜಮಾನರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಆ ನಂತರ ಯಜಮಾನ್ ಜಗನ್ನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ನುಳಿಯಾಲು ಕುಟುಂಬದ ಸದಸ್ಯ, ಸಾಮಾಜಿಕ ಸೇವೆಗಾಗಿ 2023ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು ಮತ್ತು ಅವರ ಸಹಧರ್ಮಿಣಿ ಅಮಿತಾ ರವೀಂದ್ರ ಶೆಟ್ಟಿ ಅವರನ್ನು ಸಮಸ್ತ ಕುಟುಂಬಿಕರು ಮತ್ತು ಬಂಧುಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಕು.ಸಮನ್ವಿ ರೈಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿಯವರು ಸ್ವಾಗತಿಸಿ, ನುಳಿಯಾಲು ಪುರಂದರ ರೈ, ಮಿತ್ರಂಪಾಡಿ,ನಿವೃತ್ತ ಬ್ಯಾಂಕ್ ಅಧಿಕಾರಿ ಜಯರಾಮ ರೈ ನುಳಿಯಾಲು, ನಿವೃತ್ತ ಪ್ರಾಧ್ಯಾಪಕ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಅಭಿನಂದನಾ ಭಾಷಣ ಮಾಡಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀನಿವಾಸ ರೈ ನುಳಿಯಾಲು ವೇದಿಕೆಯಲ್ಲಿದ್ದು ಅಭಿನಂದಿಸಿದರು. ಸನ್ಮಾನಿತರಿಗೆ ಸಲ್ಲಿಸಿದ ಅಭಿನಂದನಾ ಠರಾವನ್ನು ರಾಧಾಕೃಷ್ಣ ರೈ ನುಳಿಯಾಲು ವಾಚಿಸಿದರು. ಸನ್ಮಾನಕ್ಕೆ ಉತ್ತರವಾಗಿ ರವೀಂದ್ರ ಶೆಟ್ಟಿ ನುಳಿಯಾಲು ಅವರು, ಜೀರ್ಣಾವಸ್ಥೆಯಲ್ಲಿದ್ದ ನುಳಿಯಾಲು ಮನೆತನದ ಪುನರುತ್ಥಾನದ ಕಾಲಘಟ್ಟದಲ್ಲಿ ಎದುರಿಸಬೇಕಾಗಿ ಬಂದ ಸಂಕಷ್ಟ, ಸವಾಲುಗಳನ್ನು ವಿಶದವಾಗಿ ವಿವರಿಸಿದರು. ಕಾರ್ಯಕ್ರಮದ ಪ್ರಸ್ತಾವನೆ ಮತ್ತು ನಿರ್ವಹಣೆಯನ್ನು ನುಳಿಯಾಲು ಚಿತ್ತರಂಜನ್ ಶೆಟ್ಟಿಯವರು ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಯುತ ಲಕ್ಷ್ಮೀನಾರಾಯಣ ರೈ ನುಳಿಯಾಲು ರವರು ಧನ್ಯವಾದ ಸಮರ್ಪಣೆ ಯನ್ನು ನಡೆಸಿಕೊಟ್ಟರು.
ಆ ನಂತರ ತರವಾಡು ಮನೆಯ ಒಳ ಅಂಗಳದಲ್ಲಿ ನಡೆದ ಬಲೀಂದ್ರ ಪೂಜೆ, ಬಲೀಂದ್ರ ಲೆಪ್ಪು ಕಾರ್ಯಕ್ರಮದಲ್ಲಿ ಯಜಮಾನರು ಬಲೀಂದ್ರ ನನ್ನು ಪ್ರಾರ್ಥಿಸಿದ ನಂತರ, ನುಳಿಯಾಲು ರಾಧಾಕೃಷ್ಣ ರೈಯವರು ಬಲೀಂದ್ರ ಸಂದಿಯೊಂದಿಗೆ ಬಲೀಂದ್ರ ಲೆಪ್ಪು ಕಾರ್ಯಕ್ರಮ ವನ್ನು ನಡೆಸಿ ಕೊಟ್ಟರು.
ಆ ನಂತರ ತರವಾಡಿನ ಗುರುಕಾರ್ಣವರ ಕೋಣೆಯಲ್ಲಿ ಗತಿಸಿದ ಹಿರಿಯರಿಗೆ ಅಗೇಲು ಬಡಿಸುವ ಕಾರ್ಯಕ್ರಮವನ್ನು ಕುಟುಂಬ ಮತ್ತು ಬಂಧುವರ್ಗದ ಮಹಿಳೆಯರು ನೆರವೇರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಟ್ರಸ್ಟಿನ ವತಿಯಿಂದ ಶುಚಿ ರುಚಿಯಾದ ಸಾಮೂಹಿಕ ಸಹಭೋಜನವನ್ನು ಏರ್ಪಡಿಸಲಾಗಿತ್ತು.
ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್ ರಿ.
ನುಳಿಯಾಲು

LEAVE A REPLY

Please enter your comment!
Please enter your name here