ಪುತ್ತೂರು: ಪುತ್ತೂರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಡಿ.3 ಮತ್ತು 4 ರಂದು ಪ್ರಥಮ ಬಾರಿಗೆ ನಡೆಯಲಿರುವ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಸ್ಪರ್ಧೆಗಳ ಪಟ್ಟಿ ಈ ರೀತಿ ಇರಲಿದೆ.
ಪ್ರೌಢಶಾಲಾ ಬಾಲಕರ ಸ್ಪರ್ಧೆಯಲ್ಲಿ 100 ಮೀ ಓಟ, 2೦೦ ಮೀಟರ್ ಓಟ, 4೦೦ ಮೀಟರ್ ಓಟ, 8೦೦ ಮೀ ಓಟ, 15೦೦ ಮೀ ಓಟ, 3 ಸಾವಿರ ಮೀ ಓಟ, 5ಸಾವಿರ ಮಿ ನಡಿಗೆ, 110 ಮೀ ಹರ್ಡಲ್ಸ್, 4*1೦೦ ಮೀ ರಿಲೇ, ಎತ್ತರ ಜಿಗಿತ, ಉದ್ದ ಜಿಗಿತ, ತ್ರಿವಿಧ ಜಿಗಿತ, ಕೋಲು ನೆಗೆತ(ಪೋಲ್ ವಾಲ್ಟ್), ಗುಂಡು ಎಸೆತ, ತಟ್ಟೆ ಎಸೆತ, ಹ್ಯಾಮರ್ ಎಸೆತ, ಈಟಿ ಎಸೆತ ಇರಲಿದೆ. ಬಾಲಕಿಯರಿಗೆ 1೦೦ ಮೀ ಓಟ, 2೦೦ ಮೀ ಓಟ, 4೦೦ ಮೀ ಓಟ, 15೦೦ ಮೀ ಓಟ, 3ಸಾವಿರ ಮೀ ಓಟ, 3ಸಾವಿರ ಮೀ ನಡಿಗೆ, 1೦೦ ಮೀ ಹರ್ಡಲ್ಸ್, 4*1೦೦ ಮೀ ರಿಲೇ, ಎತ್ತರ ಜಿಗಿತ, ಉದ್ಧ ಜಿಗಿತ, ತ್ರಿವಿಧ ಜಿಗಿತ, ಕೋಲು ನೆಗೆತ, ಗುಂಡು ಎಸೆತ, ತಟ್ಟೆ ಎಸೆತ, ಹ್ಯಾಮರ್ ಎಸೆತ, ಈಟಿ ಎಸೆತ ಸ್ಪರ್ಧೆಗಳಿವೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಅವರು ತಿಳಿಸಿದ್ದಾರೆ.