ನಾಳೆ(ನ.30): ಪುತ್ತೂರು ಸಂಚಾರ ಪೊಲೀಸ್ ಠಾಣೆ ಎ.ಎಸ್.ಐ ಕುಶಾಲಪ್ಪ ಗೌಡ ನಿವೃತ್ತಿ

0

ಪುತ್ತೂರು: ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿರುವ ಕುಶಾಲಪ್ಪ ಗೌಡ ಅವರು ನ.30ರಂದು ನಿವೃತ್ತಿ ಹೊಂದಲಿದ್ದಾರೆ. ಕೊಯಿಲ ಕೆ.ಸಿ ಫಾರ್ಮ್ ನಿವಾಸಿ ಕುಶಾಲಪ್ಪ ಗೌಡ ಅವರು ಪೊಲೀಸ್ ಇಲಾಖೆಯಲ್ಲಿ 31 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಲಿದ್ದಾರೆ.

ಆರಂಭದಲ್ಲಿ ಅವರು ಉಡುಪಿ ಜಿಲ್ಲೆಯ ಕೋಟ, ಮಂಗಳೂರು ಕದ್ರಿ, ಬಂಟ್ವಾಳ ನಗರ ಪೊಲೀಸ್ ಠಾಣೆ, ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿ, ಅರಣ್ಯ ಸಂಚಾರಿ ಪೊಲೀಸ್ ಪುತ್ತೂರು ಮತ್ತು 6 ತಿಂಗಳು ಪುತ್ತೂರು ಡಿವೈಎಸ್ಪಿ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸಿ ಎ.ಎಸ್.ಐ ಆಗಿ ಪದೋನ್ನತಿ ಹೊಂದಿದ್ದರು. ಬಳಿಕ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿ ಇದೀಗ ನಿವೃತಿ ಹೊಂದಲಿದ್ದಾರೆ. ಕುಶಾಲಪ್ಪ ಗೌಡ ಅವರು ಕೊಯಿಲ ಕೆ.ಸಿ.ಫಾರ್ಮ್ ಬಳಿ ನಿವಾಸಿಯಾಗಿದ್ದು ಪತ್ನಿ ಪ್ರೇಮಲತಾ, ಪುತ್ರ ಬಿ.ಎಸ್ಸಿಇ ಕಲಿತಿರುವ ನಿತಿನ್, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಪುತ್ರಿ ರಶ್ಮಿ ಅವರ ಜೊತೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here