ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಬಂಪರ್ ಬಹುಮಾನದಲ್ಲಿ ವಿಜೇತರಿಗೆ ದ್ವಿಚಕ್ರ ವಾಹನ ಬೈಕ್ ಹಸ್ತಾಂತರ

0

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಮತ್ತು ಗೃಹ ಉಪಯೋಗಿ ವಸ್ತುಗಳ ಮಳಿಗೆ ಪುತ್ತೂರು ಸೆಂಟರ್‌ನಲ್ಲಿರುವ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ ನ.26ರಂದು ಟಿವಿಎಸ್ ರೆಡಿಯಾನ್ ಬೈಕ್ ಗೆಲ್ಲುವ 18ನೇ ಬಂಪರ್ ಡ್ರಾ ನ.26ರಂದು ಗ್ರಾಹಕರ ಸಮ್ಮುಖದಲ್ಲಿ ನಡೆಯಿತು.


ಅಕ್ಷಯ ಗ್ರೂಪ್‌ನ ಜಯಂತ ನಡುಬೈಲು ಬಂಪರ್ ಡ್ರಾ ನಡೆಸಿಕೊಟ್ಟರು. ಟಿವಿಎಸ್ ರೆಡಿಯಾನ್ ಬೈಕ್ ಬಂಪರ್ ಡ್ರಾ ವಿಜೇತರಾದ ಸರ್ವೆ ನೇರೋಳ್ತಡ್ಕದ ಮಹಮ್ಮದ್ ಸಿರಾಜುದ್ದೀನ್(ಎಡಿ 3096)ರವರಿಗೆ ನ.29ರಂದು ಮಾಲಕ ರೂಪೇಶ್ ಶೇಟ್‌ರವರು ಬೈಕ್‌ನ ಕೀ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡ್ರಾ ವಿಜೇತ ಗ್ರಾಹಕರು ಶೇಟ್ ಇಲೆಕ್ಟ್ರಾನಿಕ್ಸ್‌ನ ಮಾರಾಟ, ಸರ್ವಿಸ್ ಮತ್ತು ಗುಣಮಟ್ಟದ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶೇಟ್ ಇಲೆಕ್ಟ್ರಾನಿಕ್ಸ್‌ನ ಉದ್ಯೋಗಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here