ಪುತ್ತೂರು: ನ.23ರಿಂದ 26ರ ತನಕ ವಿಶಾಖಪಟ್ಟಣದಲ್ಲಿ ನಡೆದ ‘WAI ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ-2023’ ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಜೈನಾಥ್ ವಿ ಶೆಟ್ಟಿಯವರು ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ (70-75 ಕೆ.ಜಿ ಮೇಲೆ) ಸ್ಥಾನವನ್ನು ಪಡೆದು 2 ಚಿನ್ನದ ಪದಕವನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಉಜ್ಬೇಕಿಸ್ತಾನ್, ನೇಪಾಲ್, ಬಾಂಗ್ಲಾ, ಶ್ರೀಲಂಕಾ, ಭೂತಾನ್, ಮಲೇಶಿಯಾ, ಇಂಗ್ಲೆಂಡ್ ಮುಂತಾದ ದೇಶದ ಸ್ಪರ್ಧಿಗಳು ಭಾಗವಹಿಸಿದ್ದರು. ವಿವೇಕಾನಂದ ಕಾಲೇಜಿನ ಎಂಬಿಎ ವಿದ್ಯಾರ್ಥಿಯಾಗಿರುವ ಇವರು ಟಿಡಿ ಥೋಮಸ್ ಇವರ ಶಿಷ್ಯ. ಸುದಾನ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಪುತ್ತೂರು ಕಲ್ಲಿಮಾರು ನಿವಾಸಿ ವಿಶ್ವನಾಥ ಶೆಟ್ಟಿ ಹಾಗೂ ಗೀತಾ ವಿಶ್ವನಾಥ ಶೆಟ್ಟಿ ದಂಪತಿಯ ಪುತ್ರ.