ಪುತ್ತೂರು: ಪುತ್ತೂರಿನಲ್ಲಿ 6 ವರ್ಷಗಳ ಹಿಂದೆ ನಿಂತು ಹೋಗಿದ್ದ ಅಯ್ಯಪ್ಪ ದೀಪೋತ್ಸವವು ಮತ್ತೊಮ್ಮೆ ಅದ್ಧೂರಿಯಾಗಿ ನಡೆಸುವ ಕುರಿತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಭಕ್ತರ ಚಿಂತನಾ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರ ಅಧ್ಯಕ್ಷತೆಯಲ್ಲಿ ದೇವಳದ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡು ದೀಪೋತ್ಸವದ ಯಶಸ್ವಿಗಾಗಿ ಸಾರ್ವಜನಿಕ ಆಚಾರಣಾ ಸಮಿತಿ ರಚನೆ ಮಾಡಲಾಗಿದೆ. ಅಯ್ಯಪ್ಪ ದೀಪೋತ್ಸವದಲ್ಲಿ ವಿಜೃಂಭಣೆಯ ಮೆರವಣಿಗೆ, ಅಯ್ಯಪ್ಪ ವೃತಧಾರಿಗಳಿಂದ ಪಾಲಶ ಕೊಂಬೆಯ ಮೆರವಣಿಗೆ, ದೇವಸ್ಥಾನದ ಎದುರು ಗದ್ದೆಯಲ್ಲಿ ಅಯ್ಯಪ್ಪ ವಿಳಕ್ಕು , ಕೆಂಡ ಸೇವೆ ಸಹಿತ ಧರ್ಮ ಸಭೆಯಲ್ಲಿ ಹಿರಿಯ ಅಯ್ಯಪ್ಪ ವ್ರತದಾರಿ ಗುರುಸ್ವಾಮಿಗಳನ್ನು ಗೌರವಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಮುಂದೆ ಡಿ.3ಕ್ಕೆ ಸಂಜೆ ಪೂರ್ವ ಸಿದ್ದತಾ ಸಭೆಯನ್ನು ಕರೆಯುವ ನಿರ್ಣಯ ಕೈಗೊಳ್ಳಲಾಯಿತು. ಅಯ್ಯಪ್ಪ ದೀಪೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಕಾರ್ಯಾಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಇಡ್ಕಿದು, ಉಪಾಧ್ಯಕ್ಷರನ್ನಾಗಿ ಸತೀಶ್ ನಾಕ್, ಗುರುಸ್ವಾಮಿಗಳಾದ ರಾಮಣ್ಣ ಗೌಡ ಮತ್ತು ಸಂಚಾಲಕರಾಗಿ ಮುರಳಿಕೃಷ್ಣ ಹಸಂತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಗುರುಸ್ವಾಮಿ ದೇವಾನಂದ ಎಸ್, ಜೊತೆ ಕಾರ್ಯದರ್ಶಿಗಳಾಗಿ ಗುರುಸ್ವಾಮಿ ಮನೋಜ್ ಚಂದ್ರ, ಹರೀಶ್ ಕೈಕಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನ್ಮಥ ಶೆಟ್ಟಿ, ಸ್ವಾಗತ ಸಮಿತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್‌ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಿ.ಕೆ.ವೀಣಾ, ರವೀಂದ್ರನಾಥ ರೈ ಬಳ್ಳಮಜಲು, ಡಾ.ಸುಧಾ ಎಸ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಧವ ಸ್ವಾಮಿ, ರಾಧಾಕೃಷ್ಣನಂದಿಲ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.