ನಿಡ್ಪಳ್ಳಿ: ಗ್ರಾಮ ಪಂಚಾಯತ್ ಪಾಣಾಜೆ ಇದರ ವ್ಯಾಪ್ತಿಗೊಳಪಟ್ಟ ಶಾಲಾ ಮಕ್ಕಳ ಗ್ರಾಮ ಸಭೆ ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿ ನ.22 ರಂದು ನಡೆಯಿತು.
ಒಡ್ಯ ಶಾಲಾ 8ನೇ ತರಗತಿ ವಿದ್ಯಾರ್ಥಿ ಲಾವಣ್ಯ.ಕೆ ಸಭೆಯ ಅಧ್ಯಕ್ಷತೆ ವಹಿಸಿ, ಉಪಾಧ್ಯಕ್ಷ ಸ್ಥಾನವನ್ನು ಪಾಣಾಜೆ ಶಾಲೆಯ ಫಾತಿಮತ್ ಮುಫಿದಾ ವಹಿಸಿದ್ದರು. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮುನಾತುಲ್ ಮೆಹ್ರಾ, ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ ಪಂಚಾಯತ್ ಸದಸ್ಯರಾದ ನಾರಾಯಣ ನಾಯಕ್, ಕೃಷ್ಣಪ್ಪ ಪೂಜಾರಿ, ಮೋಹನ ನಾಯ್ಕ, ವಿಮಲ, ಪಿಡಿಒ ಆಶಾ ಉಪಸ್ಥಿತರಿದ್ದರು. ಬೆಟ್ಟಂಪಾಡಿ ಕ್ಲಸ್ಟರ್ ಸಿ. ಆರ್. ಪಿ. ಪರಮೇಶ್ವರಿ,ಎಸ್. ಡಿ. ಎಂ. ಸಿ ಅಧ್ಯಕ್ಷ ದೇವಪ್ಪ ನಾಯ್ಕ ಕೊಂದಲ್ಕಾನ ಮತ್ತು ಸದಸ್ಯರು ,ಮುಖ್ಯಗುರು ಜನಾರ್ಧನ ಅಲ್ಚಾರು ಮತ್ತು ಎಲ್ಲಾ ಶಾಲೆಗಳ ಶಿಕ್ಷಕ ವೃಂದ,ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಭವ್ಯಶ್ರೀ.ಕೆ ಸ್ವಾಗತಿಸಿ, ಪೂಜಾಶ್ರೀ ವಂದಿಸಿದರು. ದೀಪ್ತಿಲಕ್ಷ್ಮೀ. ಪಿ ಕಾರ್ಯಕ್ರಮ ನಿರೂಪಿಸಿದರು. ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವೇಕ ಅಂಗ್ಲ ಮಾಧ್ಯಮ ಶಾಲೆ, ಪಾಣಾಜೆ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸುಬೋಧ ಪ್ರೌಢಶಾಲೆ , ಒಡ್ಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೂರಂಬೈಲು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿ ತಮ್ಮ ಶಾಲೆಗೆ ಅಗತ್ಯವುಳ್ಳ ಬೇಡಿಕೆಯನ್ನು ಸಭೆಯ ಗಮನಕ್ಕೆ ತಂದರು. ಈ ಗ್ರಾಮ ಸಭೆಯನ್ನು ಬಹಳ ಅಚ್ಚುಕಟ್ಟಾಗಿ ನಡೆಸಿದ ಒಡ್ಯ ಶಾಲೆಗೆ ಪಂಚಾಯತ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಪ್ರತಿ ಶಾಲೆಯಿಂದ ಬಂದ ಮಕ್ಕಳ ಬೇಡಿಕೆಗಳು…
ತಮ್ಮ ತಮ್ಮ ಶಾಲೆಗೆ ಅಗತ್ಯವಿರುವ ಕೆಲವು ಬೇಡಿಕೆಯನ್ನು ವಿದ್ಯಾರ್ಥಿಗಳು ಸಭೆಯ ಗಮನಕ್ಕೆ ತಂದರು.ತರಗತಿ ಕೋಣೆ ,ಶೌಚಾಲಯ, ಆವರಣ ಗೋಡೆ, ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯೊಗ ಶಾಲೆ, ಪುತ್ತೂರು ಪಾಣಾಜೆಗೆ ಸರಿಯಾದ ರೀತಿಯಲ್ಲಿ ಬಸ್ಸು ವ್ಯವಸ್ಥೆ ಸೇರಿದಂತೆ ತಮ್ಮ ತಮ್ಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಬೇಡಿಕೆ ಸಲ್ಲಿಸಿದರು. ಶಾಲೆಗಳ ವಿವಿಧ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯತ್ ಅಧ್ಯಕ್ಷರು ಪಂಚಾಯತ್ ನಿಂದ ಸಾಧ್ಯವಿರುವ ಸಹಕಾರವನ್ನು ನೀಡುವುದಾಗಿ ತಿಳಿಸಿದರು.