ಪುತ್ತೂರು: ಸವಣೂರು ಮುಂಡತಡ್ಕ ಶ್ರೀ ಮಾರಿಯಮ್ಮ ದೇವಿ, ಸಪರಿವಾರ ದೈವಗಳ ಪುನರ್ ಪ್ರತಿಷ್ಠೆಯು ದ. 7 ರಂದು ಜರಗಿತು. ಬೆಳಿಗ್ಗೆ ಗಣಪತಿ ಹೋಮ,
ಶ್ರೀ ಮಾರಿಯಮ್ಮ ದೇವಿ, ಮಲ್ಲಮ್ಮ, ಸಣ್ಣಮ್ಮ, ಕೆಂಚಮ್ಮ, ದುರ್ಗಾಂಬಾ (ಸಪ್ತದುರ್ಗೆಯರು) ಸತ್ಯಸಾರ ಮಾಣಿ, ಧರ್ಮದೈವ ಪಂಜುರ್ಲಿ, ಕಲ್ಲುರ್ಟಿ ದೈವಗಳ ಪ್ರತಿಷ್ಠೆ ನಡೆಯಿತು.
ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ ದೈವದ ಭಂಡಾರ ತೆಗೆಯುವ ಕಾರ‍್ಯಕ್ರಮ ನಡೆಯಿತು ಸಂಜೆ ಭಜನೆ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಮುಂಡತಡ್ಕ ಶ್ರೀ ಮಾರಿಯಮ್ಮ ದೇವೀ, ಸಪರಿವಾರ ದೈವಗಳ ದೇವಸ್ಥಾನದ ಪ್ರತಿಷ್ಠಾ ಸಮಿತಿ ಅಧ್ಯಕ್ಷ ದಿನೇಶ್ ಮೆದು, ಕಾರ‍್ಯದರ್ಶಿ ತಾರಾನಾಥ ಕಾಯರ್ಗ, ಗೌರವಾಧ್ಯಕ್ಷರುಗಳಾದ ರಾಜರಾಮ ಪ್ರಭು ಅಶ್ವಿನಿ ಫಾರ್ಮ್ಸ್ ಸವಣೂರು, ರಾಕೇಶ್ ರೈ ಕೆಡೆಂಜಿ, ಮೋಹನ್‌ದಾಸ್ ರೈ ದೋಳ್ಪಾಡಿ, ಪ್ರಭಾಕರ್ ಶೆಟ್ಟಿ ನಡುಬೈಲು, ಸದಸ್ಯರುಗಳಾದ ಗಿರಿಶಂಕರ್ ಸುಲಾಯ ದೇವಸ್ಯ, ಸುರೇಶ್ ರೈ ಸೂಡಿಮುಳ್ಳು, ಸುಪ್ರೀತ್ ರೈ ಖಂಡಿಗ, ಪ್ರಜ್ವಲ್ ಕೆ.ಆರ್, ಸತೀಶ್ ಅಂಗಡಿಮೂಲೆ, ಮಹೇಶ್ ಕೆ.ಸವಣೂರು, ಜಯಪ್ರಕಾಶ್ ಊರುಸಾಗು, ಮೋಹನ್ ರೈ ಕೆರೆಕೋಡಿ, , ರತನ್ ಕುಮಾರ್ ಅಗರಿ, ಮಿಥುನ್ ಅಗರಿ, ಸಚಿನ್ ಕುಮಾರ್ ಜೈನ್, ತೀರ್ಥರಾಜ್ ಕೆಡೆಂಜಿ, ಶ್ರೀಧರ್ ಇಡ್ಯಾಡಿ, ಗಂಗಾಧರ್ ಪೆರಿಯಡ್ಕ, ಸಂಜೀವ ಪೂಜಾರಿ ಅಗರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಬು ದೋಳ್ಪಾಡಿ, ಉಪಾಧ್ಯಕ್ಷ ಬಾಬು ಮುಂಡೋತ್ತಡ್ಕ, ಗೌರವಾಧ್ಯಕ್ಷ ಕಿನ್ನಿಗ ಆರ್, ಕಾರ‍್ಯದರ್ಶಿ ಕಿರಣ್‌ಕುಮಾರ್ ಜಿ. ಕೊಂತೂರು, ಜೊತೆ ಕಾರ‍್ಯದರ್ಶಿಗಳಾದ ಹರೀಶ್ ಮುಂಡೋತ್ತಡ್ಕ, ಕೋಶಾಧಿಕಾರಿ ಯೋಗೀಶ್ ಮುಂಡೋತ್ತಡ್ಕ, ಹರೀಶ್ ಆರ್ ರಾಮಕುಂಜ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ವಸಂತ್ ದೋಳ್ಪಾಡಿ, ಕೇಶವ ಕೊಂತೂರು, ದಿನೇಶ್ ಮುಂಡೋತ್ತಡ್ಕ, ಸುಂದರ ಎಸ್ ಅಟ್ಟೋಳೆ, ಕೇಶವ ಮುಂಡೋತ್ತಡ್ಕ, ಹೊನ್ನಮ್ಮ ಐವರ್ನಾಡು, ಮೋಹನ್ ರಾಮಕುಂಜ, ಗುಲಾಬಿ ಮುಂಡೋತ್ತಡ್ಕ, ಸುಂದರಿ ಬಿ.ಮಡಿಕೇರಿ, ಚಂದ್ರಶೇಖರ್ ಮುಂಡೋತ್ತಡ್ಕ, ಪ್ರಶಾಂತ್ ಕಳಾರ ಕಡಬ, ಕಮಲ ದೋಳ್ಪಾಡಿ, ಗುಲಾಬಿ ಕೊಂತೂರು ಹಾಗೂ ಸಂಜಿವ ಮುಂಡೋತ್ತಡ್ಕ ಉಪಸ್ಥಿತರಿದ್ದರು.
ಇಂದು ಸವಣೂರು ಮುಂಡತಡ್ಕದಲ್ಲಿ ಮಹಾದೇವಿಗೆ ಮಹಾಪೂಜೆ
ದ. 8 ರಂದು ಪ್ರಾತಃಕಾಲ ಮಾರಿಕ್ಕಳ, ಮಧ್ಯಾಹ್ನ ಮಾರಿಯಮ್ಮ ಮಹಾದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ ಎಂದು ಮುಂಡತಡ್ಕ ಶ್ರೀ ಮಾರಿಯಮ್ಮ ದೇವಿ, ಸಪರಿವಾರ ದೈವಗಳ ದೇವಸ್ಥಾನದ ಪ್ರತಿಷ್ಠಾ ಸಮಿತಿ ಅಧ್ಯಕ್ಷ ದಿನೇಶ್ ಮೆದು ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಬು ದೋಳ್ಪಾಡಿ ತಿಳಿಸಿದ್ದಾರೆ.