





ಕಾಣಿಯೂರು: ಕಾಣಿಯೂರು ಯಕ್ಷಮಿತ್ರ ಬಳಗ ವತಿಯಿಂದ ಜ 2ರಂದು ಕಾಣಿಯೂರು ಜಾತ್ರಾ ಗದ್ದೆಯಲ್ಲಿ ನಡೆಯಲಿರುವ ಶ್ರೀ ದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರವನ್ನು ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರದಲ್ಲಿ ಕಾಣಿಯೂರು ಮಠದ ಮ್ಯಾನೇಜರ್ ನಿರಂಜನ್ ಆಚಾರ್ ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಯಕ್ಷಮಿತ್ರ ಬಳಗದ ಅಧ್ಯಕ್ಷ ಹರಿಪ್ರಸಾದ್ ರೈ ಕಾಣಿಯೂರು, ಸಂಚಾಲಕ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿ ನಾರಾಯಣ ಭಟ್, ಉಪಾಧ್ಯಕ್ಷ ಮೋನಪ್ಪ ಬಂಡಾಜೆ ,ಜತೆ ಕಾರ್ಯದರ್ಶಿ ರಕ್ಷಿತ್ ಭಂಡಾರಿ, ಪದಾಧಿಕಾರಿಗಳಾದ ಜಯಂತ ವೈ, ಬಾಲಚಂದ್ರ ಅಬೀರ, ಸೀತಾರಾಮ ಅನಿಲ, ಕಾಣಿಯೂರು ಕುಮಾರ್ ಕ್ಲಿನಿಕ್ ನ
ಡಾ.ಉದಯ ಕುಮಾರ್ ಹಾಗೂ ಪರಮೇಶ್ವರ ಅನಿಲ, ಜಯಂತ ಅಬೀರ, ದಿನೇಶ್ ಪೈಕ, ರವೀಂದ್ರ ಅನಿಲ, ರಾಜೇಶ್ ಮೀಜೆ, ಸಂಪತ್ ಹೊಸೋಕ್ಲು, ವಾಸುದೇವ ನಾಯ್ಕ್ ತೋಟ, ಪ್ರಗತ್ ರಾಜ್ ಬೈತಡ್ಕ ಮತ್ತೀತರರು ಉಪಸ್ಥಿತರಿದ್ದರು.










