ಗೋಳಿತ್ತೊಟ್ಟು ಶಾಲೆಯಲ್ಲಿ ಮೆಟ್ರಿಕ್ ಮೇಳ

0

ನೆಲ್ಯಾಡಿ: ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ವ್ಯವಹಾರ ಕೌಶಲ್ಯವನ್ನು ಅಭಿವದ್ಧಿಗೊಳಿಸುವ ಸದುದ್ದೇಶದಿಂದಮೆಟ್ರಿಕ್ ಮೇಳ ನಡೆಯಿತು.


ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದಿರುವ ವಿವಿಧ ತರಕಾರಿಗಳಾದ ಕುಂಬಳಕಾಯಿ, ಸೋರೆಕಾಯಿ, ತೊಂಡೆಕಾಯಿ, ಬಸಳೆ, ನುಗ್ಗೆ ಸೊಪ್ಪು, ಒಂದೆಲಗ, ವೀಳ್ಯದೆಲೆ, ಸಿಹಿಗೆಣಸು, ತೆಂಗಿನಕಾಯಿ ಹಾಗೂ ಹಣ್ಣು ಹಂಪಲುಗಳಾದ ಬಾಳೆಹಣ್ಣು, ಅಂಬಟೆಕಾಯಿ, ಕಬ್ಬು, ಜಂಬುನೇರಳೆ, ಚಕೋತ, ಅನನಾಸು, ನೆಲ್ಲಿಕಾಯಿ, ಮಾವಿನ ಹಣ್ಣು, ತಂಪು ಪಾನೀಯಗಳಾದ ಕಲ್ಲಂಗಡಿ ಜ್ಯೂಸ್, ಎಳ್ಳು ಜ್ಯೂಸ್, ಗಸಗಸ್ ಜ್ಯೂಸ್, ಚಾಕಲೇಟ್ ಜ್ಯೂಸ್, ಮಜ್ಜಿಗೆ, ಜೇನು ತುಪ್ಪ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಿದರು. ಮನೆಯಲ್ಲಿಯೇ ತಯಾರಿಸಿದ ತಿಂಡಿಗಳಾದ ಬಟಾಟೆ ಬೋಂಡ, ಚಕ್ಕುಲಿ, ಚಿಪ್ಸ್, ಅಚ್ಚಪ್ಪ ಸೇರಿದಂತೆ ಅಕ್ಕಿಯಿಂದ ತಯಾರಿಸಿದ ರುಚಿಕರವಾದ ತಿಂಡಿಗಳು, ಚರುಮುರಿ ಅಂಗಡಿಗಳು, ಪಾನಿಪುರಿ ಅಂಗಡಿಗಳು, ಲಕ್ಕಿಗೇಮ್ ಅಂಗಡಿಗಳು, ಫ್ಯಾನ್ಸಿ ಅಂಗಡಿ, ಜವಳಿ ಅಂಗಡಿ, ಪುಸ್ತಕದ ಅಂಗಡಿಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ತೋರಿಸುತ್ತಿತ್ತು.
ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲ ಗೌಡರವರು ಉದ್ಘಾಟಿಸಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಹಸೀನಾ ಪರ್ವಿನ್‌ತಾಜ್, ಸದಸ್ಯ ಜೋಸೆಫ್, ವಿದ್ಯಾರ್ಥಿಗಳ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರಿನ ನಾಗರಿಕರು ಭಾಗವಹಿಸಿ ವಿದ್ಯಾರ್ಥಿಗಳ ವ್ಯವಹಾರ ಕೌಶಲ್ಯವನ್ನು ಪ್ರಶಂಸಿ ಪ್ರೋತ್ಸಾಹಿಸಿದರು. ಶಾಲಾ ಮುಖ್ಯಗುರು ಜಯಂತಿ ಬಿ.ಎಂ., ಸ್ವಾಗತಿಸಿದರು. ಮೆಟ್ರಿಕ್ ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಶಾಲೆಯ ಸಹ ಶಿಕ್ಷಕಿಯಾದ ತೇಜಸ್ವಿ ಅಂಬೆಕಲ್ಲು, ಅಬ್ದುಲ್ ಲತೀಫ್ ಸಿ, ಮನ್ವಿತಾ ಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಜೋನ್.ಕೆ.ಪಿ, ಶಾಲಾ ಗೌರವ ಶಿಕ್ಷಕಿ ಯಶಸ್ವಿನಿ ಕೆ.ಜಿ. ಸೇರಿದಂತೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here