ಪುತ್ತೂರು: ದ.14 ನೇ ಗುರುವಾರ ಸಂಜೆ ಗಂಟೆ 5.00ಕ್ಕೆ ಶಾಂತಿಮೊಗೇರು ದ್ವಾರದ ಬಳಿ ಅಯೋಧ್ಯೆ ಶ್ರೀರಾಮ ದೇವರ ಮಂತ್ರಾಕ್ಷತೆಯು ಆಗಮಿಸಲಿದ್ದು, ಶ್ರೀ ರಾಮನಿಗೆ ಪುಷ್ಪಾರ್ಚನೆ ಮಾಡಿ ಪೂರ್ಣಕುಂಭ ಸ್ವಾಗತವನ್ನು ಮಾಡಿ, ಚೆಂಡೆ, ಭಜನಾ ತಂಡಗಳ ಮುಖಾಂತರ ಭವ್ಯ ಮೆರವಣಿಗೆಯಲ್ಲಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪ್ತಿಯಾಗಲಿದೆ.
ಪ್ರತಿ ಮನೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗುವಂತೆ ವಿನಂತಿಯನ್ನು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಮಾಡಲಾಯಿತು. ದೇವಾಲಯದ ಅನುವಂಶೀಯ ಮೋಕ್ತೇಸರ ಜನೇಶ್ ಭಟ್, ಬೆಳಂದೂರು ಗ್ರಾ.ಪಂ, ಮಾಜಿ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯ ಪ್ರವೀಣ್ ಕೆರೆನಾರು, ಪ್ತಮುಖರಾದ ಕೃಷ್ಣ ಭಟ್, ಪುನೀತ್ ಕುಮಾರ್, ಕಿರಣ್ ಡೆಬ್ಬೇಲಿ, ಉದಯ ಕೆರೆನಾರು, ಅಂಚನ್ ಡೆಬ್ಬೇಲಿ, ಲೋಕೇಶ್ ಬಿ.ಎನ್, ಬರೆಪ್ಪಾಡಿ, ರತನ್ ಡೆಬ್ಬೇಲಿ, ಸತೀಶ್ ಹೊಸವೊಕ್ಲು, ದಾಮೋದರ ನಾಕಿರಣ, ಮೋಹನ್ ಎ, ನಾರಾಯಣ ಟಿ, ರಂಜಿತ್ ಹಾಗೂ ಜೀತಾಕ್ಷ ಜಿ ಉಪಸ್ಥಿತರಿದ್ದರು.
ವಿ.ಸೂ:
1.ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪೂರ್ಣಕುಂಭ ಸ್ವಾಗತದಲ್ಲಿ ಸಮಯಕ್ಕೆ ಸರಿಯಾಗಿ ಸೇರಿ ಕೊಳ್ಳುವಂತೆ ವಿನಂತಿ.
2.ಪುರುಷರು ಕೇಸರಿ ಅಥವಾ ಬಿಳಿ ಪಂಚೆಯಲ್ಲಿ ಭಾಗವಹಿಸುವಂತೆ ವಿನಂತಿ.
3.ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ವಿನಂತಿ