ಪೊದೆಯಿಂದ ತುಂಬಿದ ಸಿಂಹವನ- ಆನಂದಾಶ್ರಮ ರಸ್ತೆ : ಮಹಿಳೆಯಿಂದ ಶಾಸಕರಿಗೆ ದೂರು-ನಗರಸಭೆಗೆ ಸೂಚನೆ: ಪೊದೆ ತೆರವು

0


ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಸಿಂಹವನ- ಆನಂದಾಶ್ರಮ ರಸ್ತೆಯಲ್ಲಿ ಹುಲ್ಲು ಮತ್ತು ಪೊದೆಗಳು ತುಂಬಿ ನಡೆದಾಡಲೂ ಸಾಧ್ಯವಗುತ್ತಿಲ್ಲ ಎಂದು ಸ್ಥಳೀಯ ಮಹಿಳೆಯೋರ್ವರು ಶಾಸಕರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದ್ದು, ಶಾಸಕರು ತಕ್ಷಣವೇ ನಗರಸಭಾ ಅಧಿಕಾರಿಗೆ ಪೊದೆ ತೆರವು ಮಾಡುವಂತೆ ಸೂಚನೆಯನ್ನು ನೀಡಿದ್ದು ಅದರಂತೆ ಪೊದೆ ತೆರವು ಕಾರ್ಯ ನಡೆದಿದೆ.


ಈ ರಸ್ತೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಪೊದೆಗಳು ತುಂಬಿಕೊಂಡಿದ್ದವು. ವಾಹನದಲ್ಲಿ ತೆರಳುವಾಗ ಮತ್ತು ಪಾದಚಾರಿಗಳಿಗೆ ಸಂಚಾರಕ್ಕೆ ಕಷ್ಟವಾಗಿತ್ತು. ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದರೂ ತೆರವು ಕಾರ್ಯ ನಡೆದಿರಲಿಲ್ಲ. ಇದರಿಂದ ನೊಂದ ಮಹಿಳೆ ಶಾಸಕರಿಗೆ ಮೊಬೈಲ್ ಕರೆ ಮಾಡಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ತಕ್ಷಣ ನಗರಸಭೆಗೆ ಶಾಸಕ ಅಶೋಕ್ ರೈ ಸೂಚನೆ ನೀಡಿ ಸಿಂಹವನ ಸೇರಿದಂತೆ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ಪೊದೆ, ಹುಲ್ಲುಗಳು ತುಂಬಿದ್ದರೆ ಪರಿಶೀಲನೆ ಮಾಡಿ ಅದನ್ನು ತಕ್ಷಣ ತೆರವು ಮಾಡಬೇಕು. ರಸ್ತೆಯಲ್ಲಿ ತೆರಳುವ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು, ಶಾಲಾ ಮಕ್ಕಳು ನಡೆದುಕೊಂಡು ಹೋಗುವ ವೇಳೆ ಪೊದೆಗಳಿಂದ ಹಾವುಗಳು ಬರುವ ಸಾಧ್ಯತೆ ಇದ್ದು ತಕ್ಷಣ ಕಾರ್ಯಪೃವೃತ್ತರಾಗಬೇಕೆಂದು ಸೂಚನೆಯನ್ನು ನೀಡಿದ್ದರು.

ಮಳೆಗಾಲದಲ್ಲಿ ರಸ್ತೆ ಬದಿ, ಕೆಲವು ಕಡೆಗಳಲ್ಲಿ ರಸ್ತೆ ಮಧ್ಯದವರೆಗೂ ಹುಲ್ಲು, ಪೊದೆಗಳು ಬೆಳೆಯುತ್ತದೆ, ಇದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ರಸ್ತೆ ಬದಿಯಲ್ಲಿರುವ ಪೊದೆಗಳನ್ನು ತೆರವು ಮಾಡುವಂತೆ ನಗರಸಭೆಗೆ ಸೂಚನೆ ನೀಡಿದ್ದೇನೆ, ನಗರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲೂ ತೆರವು ಕಾರ್ಯಾಚರಣೆ ನಡೆಯಲಿದೆ.
ಅಶೋಕ್‌ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here