ಪುತ್ತೂರು: ಭಿನ್ನಾಭಿಪ್ರಾಯ ಗುಂಪುಗಳು ಒಟ್ಟಾಗಲೆಂದು ಬಿಜೆಪಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದೇನೆ, ಪುತ್ತಿಲ ಪರಿವಾರದ ಅಭ್ಯರ್ಥಿಗಳು ಶುಭ ಹಾರೈಸುತ್ತೇನೆ ಎಂದು ಡಾ.ಸುರೇಶ್ ಪುತ್ತೂರಾಯ ಅವರು ನೀಡಿದ ಹೇಳಿಕೆ ವಿಡಿಯೋ ವೈರಲ್ ಆಗಿದೆ.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ಆಡಳಿತದಲ್ಲಿ ದೇಶ ಇನ್ನಷ್ಟು ಉತ್ತಮವಾಗಿ ಬೆಳೆದು ವಿಶ್ವಮಾನ್ಯ ರಾಷ್ಟ್ರವಾಗಿ ಮೂಡಿ ಬರುವ ಆಸೆ ಇದೆ.
ಇದರ ಭಾಗವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವ ಎಲ್ಲ ಗುಂಪುಗಳು ಒಂದಾಗಿ ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಮೋದಿಜಿಯವರನ್ನು ಗೆಲ್ಲಿಸಬೇಕು ಎಂಬುದು ನನ್ನ ಆಶಯ. ಮುಂದಿನ ಪುತ್ತೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳಿಗೆ ಶುಭವಾಗಲೆಂದು ನಾನಿಂದು ಹಾರೈಸಿದ್ದೇನೆ. ಅದೇ ರೀತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೂ ಶುಭವಾಗಲೆಂದು ಹಾರೈಸುತ್ತೇನೆ. ಎಲ್ಲರೂ ಒಂದಾಗಬೇಕೆಂದು ಹೆಚ್ಚಿನ ಜನರ ಆಶಯ. ಅದೇ ರೀತಿ ಹಿಂದು ಸಮಾಜದ ಭವ್ಯ ಕನಸು ರಾಮ ಮಂದಿರ.ಅದು ಈಗ ನನಸಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಎಲ್ಲರು ಒಟ್ಟುಗೂಡುವಂತಾಗಬೇಕು. ಅದೇ ರೀತಿ ಪುತ್ತೂರಿನಲ್ಲಿ ಡಿ.24 ಮತ್ತು 25 ರಂದು ಪುತ್ತಿಲ ಪರಿವಾರದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಎಲ್ಲಾ ಹಿಂದು ಸಮಾಜ ಬಂಧುಗಳು ಬರುವಂತೆ ಅವರು ವಿನಂತಿಸಿದ್ದಾರೆ.